ಡಾ. ವೆಂಕಟೇಶ ಪ್ರಸಾದ ಹೆಚ್.ಡಿ. ಅವರ ಕವನ ಸಂಕಲನ-ವಿಚಿತ್ರ ಪಿಸು ಮಾತು. ಈ ಕೃತಿಯಲ್ಲಿ ಒಟ್ಟು 101 ಕವನಗಳಿವೆ. ವಸ್ತುವೈವಿಧ್ಯತೆಯಿಂದ ಪರಿಣಾಮಕಾರಿಯಾಗಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಸುಬ್ಬು ಹೊಲೆಯಾರ್ ‘ವಯೋ ಸಹಜವಾದ ವಿಷಯ ವಸ್ತುಗಳು ಕವಿತೆಯ ಜೀವಾಳವಾಗಿವೆ. ಪ್ರೀತಿ-ಪ್ರೇಮದ ಕವಿತೆಗಳಿವೆ. ಕೆಲವು ಗಂಭೀರ ಚಿಂತನೆಯ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬಿಂಬಿಸುವ ಕವಿತೆಗಳೂ ಇವೆ. ‘ಗೆಳೆತನ’ ಶೀರ್ಷಿಕೆಯ ಕವಿತೆಯು ಗೆಳೆತನದ ಮಹತ್ವವನ್ನು ಅತ್ಯಂತ ನವಿರಾಗಿ, ಆತ್ಮೀಯವಾಗಿ ಹೇಳಿ ಕಾವ್ಯ ಕಟ್ಟುವ ಕ್ರಿಯೆ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.
ಡಾ. ವೆಂಕಟೇಶ ಪ್ರಸಾದ ಎಚ್.ಡಿ. ಅವರು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತಂದೆ ದೇವರಾಜ ಹಾಗೂ ತಾಯಿ ಹೆಚ್.ಬಿ. ಹೇಮಾವತಿ. ವೃತ್ತಿಯಿಂದ ಶಿಕ್ಷಕರು. ಮೈಸೂರು 'ರಂಗಾಯಣ'ದಲ್ಲಿ ರಂಗ ತರಬೇತಿ, ಕಲೆ ಮತ್ತು ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಸಾಹಿತ್ಯ, ಚಿತ್ರ ಕಲೆ, ನಟನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು. ...
READ MORE