ಎಚ್.ಎಸ್. ಬೇನಾಳ ಅವರ”ಕಾವ್ಯ ಕಂಬಿನಿ’ಯಲ್ಲಿ 38 ಕವನಗಳಿವೆ. ಪ್ರತಿ ಕವನಕ್ಕೂ ಸೂಕ್ತ ರೇಖಾಚಿತ್ರಗಳ ಮೆರಗು ಇದೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಗಿರಿಮಲ್ಲ ಅವರು ’ ಬುದ್ಧ-ಬಸವ-ಅಂಬೇಡ್ಕರ್, ಸಾವಿತ್ರಿಬಾಯಿ ಹೀಗೆ ಮಾನವೀಯ ಮೌಲ್ಯಗಳ ಪ್ರತಿಪಾದಕರ ಪ್ರಭಾವವು ಕವಿಗಳ ಮನಸ್ಸನ್ನು ಆವರಿಸಿರುವಾಗ ಬೇರೆ ಯಾವುದೇ ತೆರನಾದ ವಿಚಾರಗಳನ್ನು ಹೊಂದಿದ ಕವನಗಳಿರಲು ಸಾಧ್ಯವಿಲ್ಲ. ಇಲ್ಲಿಯ ಎಲ್ಲ ಕವನಗಳ ಜೀವಾಳವೇ ಮಾನವೀಯತೆ ಆಗಿದೆ’ ಎಂದರೆ ಕವಿ. ಚನ್ನಣ್ಣ ವಾಲೀಕಾರ ಕೃತಿಯ ಬೆನ್ನುಡಿಯಲ್ಲಿ ’ಕಾವ್ಯ ಕಂಬನಿ’ ಕೃತಿಯು ಕಲೆಯ ಕಾಳಜಿಯಿಂದ ಕೂಡಿದೆ ಎಂದು ಪ್ರಶಂಸಿಸಿದ್ದಾರೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE