’ಕಾಡ್ತಾವ ಮನದಾಗ’ ಕವನಗಳ ಸಂಕಲನದಲ್ಲಿ ಕವಿಯು ಸಮಾಜ ಅಥವಾ ವ್ಯವಸ್ಥೆಯ ಅನೇಕ ಮುಖಗಳ ಅನಾವರಣಕ್ಕೆ ಮುಂದಾಗುತ್ತಾನೆ. ನಿರಾಶೆ, ಆತಂಕ ಹಾಗೂ ಅನಿಶ್ಚಿತತೆಗಳ ನೆರಳಿನಲ್ಲಿಯೇ ಬದುಕುತ್ತಿರುವ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಕವಿ ಮಾತನಾಡುತಿದ್ದು ’ಸ್ವಧರ್ಮ’ ಸಮಾಜೋದ್ಧಾರದ ಕಲ್ಪನೆಗಿಂತಲೂ ಮಾನವೀಯತೆಗೆ ಮಿಡಿದಿರುವುದು ಇಲ್ಲಿನ ಹೆಚ್ಚಿನ ರಚನೆಗಳಲ್ಲಿ ಕಾಣಬಹುದಾಗಿದೆ.
.ದಿ. ಎನ್. ಜಮಾಲ್ ಖಾನ್ ಹಾಗೂ ದಿ. ಬಿ. ಸೋಫಿಯಾ ದಂತಿಯ ಪುತ್ರ ಜೆ. ಕಲೀಂ ಬಾಷ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದವರು. ಶಾಹಿನಾ ಮತ್ತು ಇತರ ಕವಿತೆಗಳು (1987), ಮನೆಯಲ್ಲಿ ಬೆಳದಿಂಗಳು (ಮಕ್ಕಳ ಸಚಿತ್ರ ಕವನ ಸಂಕಲನ-2001 ಹಾಗೂ 2010), ಗುಜರಾತಿನಲ್ಲಿ ಗಾಂಧೀ ಆತ್ಮ (ಕವನ ಸಂಕಲನ-2002) ಬರೆದಿದ್ದಾರೆ. ಇವರ ಪ್ರೆಸ್ ರಿಪೋರ್ಟ್‌ರ್ ಕವಿತೆಗೆ (1987) ಹಾಗೂ ನೋವು ನನ್ನ ಎದೆಯಲ್ಲಿ (1999) ಚುಟುಕಿಗೆ ಸಂಕ್ರಮಣ ಸಾಹಿತ್ಯ ಬಹುಮಾನ ಹಾಗೂ ಮನೆಯಲ್ಲಿ ಬೆಳದಿಂಗಳು ಕೃತಿಗೆ ಬೆಂಗಳೂರಿನ ಗೊರೂರು ಪ್ರತಿಷ್ಠಾನ ರನ್ನ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ...
READ MORE