ಮೌನ ಮಾತಾದಾಗ(ಭಾವನೆಗಳ ಮಿಡಿತ) ಕವನಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 2017 ನೇ ಸಾಲಿನ ಯುವಬರಹಗಾರರ ಯೋಜನೆಯಡಿ ಪ್ರಕಟಿತ ಕೃತಿ. ಕವಿ ಶಿವಕುಮಾರ ಕರನಂದಿ, ತಮ್ಮ ಜೀವನಾನುಭವ ಹಾಗೂ ಕಲ್ಪನೆಯ ಮೂಸೆಯಿಂದ ಕವನಗಳನ್ನು ರಚಿಸಿದ್ದಾರೆ. ವಸ್ತು ವೈವಿಧ್ಯತೆ ಇರುವ ಒಟ್ಟು 60 ಕವನಗಳನ್ನು ಈ ಸಂಕಲನ ಒಳಗೊಂಡಿದೆ.
ಶಿವಕುಮಾರ ಮೋ ಕರನಂದಿ ಅವರು ಬಾಗಲಕೋಟೆ ಜಿಲ್ಲೆಯ ಕಾಕನೂರು ಬಳಿಯ ರಾಮದುರ್ಗದಲ್ಲಿ 07-02-1991 ರಂದು ಜನಿಸಿದರು. ತಂದೆ ದಿ. ರಾಚಪ್ಪ ಗು ಕರನಂದಿ.ರಂಗಶಿಲ್ಪಿಗಳಾಗಿದ್ದರು. ಶಿಕ್ಷಣವನ್ನು ಗುಳೇದಗುಡ್ಡ, ಬಾಗಲಕೋಟೆ ಯಲ್ಲಿ ಮಾಡಿ ಸಧ್ಯ ಇವರು ಗುಳೇದಗುಡ್ಡ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಗುಳೇದಗುಡ್ಡದಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿದ್ದಾರೆ. ಕವಿತೆ, ಭಾವಗೀತೆ,ಗಜಲ್, ಕಥೆ, ಲೇಖನ ಬರೆಯುತ್ತಾರೆ. ಇವರ ಚೊಚ್ಚಲ ಕೃತಿ 'ಮೌನ ಮಾತಾದಾಗ' ಕವನಸಂಕಲನ ವೂ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಯೋಜನೆಯಲ್ಲಿ ಆಯ್ಕೆಯಾಗಿದೆ. ಸಲಾಂ ಏ ಗಾಲಿಬ್ ಎಂಬ ಗಜಲ್ ಸಂಪಾದಿತ ಕೃತಿ. ನಾಡಿನ ಒಟ್ಟು 41 ಗಜಲ್ ಕವಿಗಳ ಗಜಲ್ಗಳಿವೆ. ಇವರು ...
READ MORE