“ಕಣ್ಣಪಾಪೆಯ ಬೆಳಕು” ಟಿ.ಯಲ್ಲಪ್ಪ ಅವರ ಕವನ ಸಂಕಲನವಾಗಿದೆ. ಕೃತಿಯ ಸಂಗ್ರಹದ ಉದ್ದಕ್ಕೂ ಓದುಗರನ್ನು ದಂಗುಬಡಿಸುವಂಥ ಕವಿತೆಗಳಿವೆ. ವಿನಯದ ಕವಚದಲ್ಲಿ ರಕ್ಷಿತವಾದ ಅವರ ಸಾತ್ವಿಕ ಆಕ್ರೋಷ ಅನನ್ಯವಾದುದು. ಅದನ್ನು ಬೇಕಾದರೆ ಹೃದಯದಲ್ಲಿ ಅಚಿತಸ್ಥವಾದ ಬಸಿರಿನ ದಿವ್ಯಾಗ್ನಿ ಅನ್ನಬಹುದು. ಭಾಷೆಯ ಸಂಯಮ, ಅರ್ಥದ ಧ್ವನ್ಯಾನುರಣನ, ಲಯದ ನಿರ್ಲಿಪ್ತಿ ಮತ್ತು ಅಂಗೈಯಲ್ಲಿ ಆರತಿ ಹಿಡಿದ ಪ್ರಾಣದ ಉರಿದೀವಿಗೆಯಿಂದಾಗಿ ಇವರ ಕವಿತೆಗಳು ಕಾವ್ಯಾಸಕ್ತರನ್ನು ಆಕ್ರಮಿಸುವ ತಾಕತ್ತುಳ್ಳವಾಗಿವೆ. ಕನ್ನಡದ ಮಹಾಕವಿಗಳ ಕಾವ್ಯದ ನಡೆಮಡಿಯ ಮೇಲೆ ವಿನಯದಿಂದ ಹೆಜ್ಜೆ ಶರಣು ಸಲ್ಲಿಸುತ್ತಾ ಸಾಗುವ ಇವರ ಕವಿತೆಗಳು ಬಹು ಪ್ರಚಲಿತ ರೂಪಕಗಳನ್ನು ಥಟ್ಟನೆ ಉಲ್ಟಾ ಮಾಡಿ ವ್ಯಂಗ್ಯಧ್ವನಿ ಸಾಧಿಸುವ ಕ್ರಮ ಮೆಚ್ಚುಗೆಯಾಗುವಂತಿದೆ. ಪುತಿನ ಗಾಂಧಿಯನ್ನು ಕುರಿತು ಬರೆದಾಗ ಸೃಷ್ಟಿಸಿದ ಗರುಡ ಮತ್ತು ಅದರ ನೆರಳು ಇಲ್ಲಿ ಪಲ್ಲಟಗೊಂಡು ಗರುಡ ಮತ್ತು ಹಕ್ಕಿಮರಿಯ ದಾರುಣ ರೂಪಕವಾಗಿ ಭವಾಂತರಗೊಂಡಿದೆ. ಮುಗ್ಧ ಹುಡುಗಿಯೊಬ್ಬಳ ಮೇಲೆ ಆಗುವ ಲೈಂಗಿಕ ಆಕ್ರಮಣದ ಹೃದಯವಿದ್ರಾವಕ ಚಿತ್ರ ಒಂದು ಪೂರ್ವಯುಗದೊಂದಿಗೆ ತಿಕ್ಕಿಕೊಳ್ಳುವ ಯತ್ನ ಮಾಡುತ್ತಾ ಹೃದಯಕ್ಕೆ ತಾಗುವ ಅನುಭವವಾಗುತ್ತದೆ. ಆಕ್ರಮಣಕ್ಕೆ ತುತ್ತಾಗಿಯೂ ಹೇಗೋ ಹದ್ದಿನ ಹಿಡಿತದಿಂದ ಪಾರಾಗಿ ಬಂದ ಕೋಳಿಮರಿಯಂತೆ ಕಾಣುವ ಮುಗ್ಧ ಹುಡುಗಿ ರೋಧಿಸುವ ತನ್ನ ತಾಯಿಗೇ ಆಡಲಾಗದ ಭಾಷೆಯೊಂದರಲ್ಲಿ ಸಾಂತ್ವನ ಹೇಳುವುದು ಒಳ್ಳೆಯ ಕವಿತೆ ಮಾತ್ರ ದಕ್ಕಿಸಿಕೊಳ್ಳಬಲ್ಲ ಆತ್ಮಸತ್ವ. ಹೀಗೆ “ಕಣ್ಣಪಾಪೆಯ ಬೆಳಕು” ಎಲ್ಲರೂ ಓದಬಹುದಾದಂತಹ ಒಂದು ಸುಂದರ ಕವನಗಳ ಸಂಗ್ರಹ ಪುಸ್ತಕವಾಗಿದೆ.
ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ 02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ...
READ MORE