ಲೇಖಕ ಪ್ರಕಾಶ ಡಂಗಿ ಅವರ ಮೊದಲ ಕವನ ಸಂಕಲನ- ʻಅವಳ ನೆನಪಲ್ಲೆʼ ಗೆಳತಿಯ ಸ್ನೇಹ, ಪ್ರೀತಿ, ಅವಳ ಒಲವನ್ನು ಆರಾಧಿಸುವ ಹೊಸತನದ ಕವಿತೆಗಳಿಂದ ತುಂಬಿದೆ. ಕೃತಿಗೆ ಡಾ. ಪ್ರಕಾಶ ಜಿ. ಖಾಡೆ ಬರೆದ ಬೆನ್ನುಡಿಯಲ್ಲಿ,ʻ ನೆನಪುಗಳಿಗೆ ಸಾವಿಲ್ಲ, ಸವಿ ನೆನಪುಗಳಂತೂ ಅಮರ ಇಂಥ ಸವಿ ನೆನಪುಗಳ ಹೂವು, ಹಣ್ಣು, ನಕ್ಷತ್ರಗಳು ಇಲ್ಲಿ ಒಲವಾಗಿ, ಒಡಲಾಗಿ, ಕವಿತೆಯ ಕಣ್ಣಾಗಿ ರೂಪ ಪಡೆದಿವೆ. ನವಿರಾದ ಪ್ರೀತಿ, ಸವಿಯ ಹೊತ್ತಗೆಯಲ್ಲಿ ಚೆಲ್ಲುವರಿದ ಸಂಭ್ರಮ ʻಅವಳ ನೆನಪಲ್ಲೆʼ ಸಂಕಲನದಲ್ಲಿ ಮೈದಾಳಿದೆ.ʼ ಎಂದು ಅಭಿಪ್ರಾಯ ಪಟ್ಟಿದ್ದಾರೆ
ಲೇಖಕ ಪ್ರಕಾಶ್ ಡಂಗಿ ಅವರು ಬಾಗಲಕೋಟೆಯಲ್ಲಿ ದಂತ ವೈದ್ಯರು. ವಿಶ್ವಖುಷಿ ಪ್ರಕಾಶನದ ಪ್ರಕಾಶಕರು, ಸಾಹಿತ್ಯ, ಫೋಟೋಗ್ರಫಿ ಇವರ ಹವ್ಯಾಸಗಳು. ಆಕಾಶವಾಣಿಯಲ್ಲಿ ಕವಿತೆ ವಾಚಿಸಿದ್ದಾರೆ,. ಇವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಅವಳ ನೆನಪಲ್ಲಿ (ಕವನ ಸಂಕಲನ- 2016), ನಾ..ನೀ ಕೇವಲ ಎರಡಕ್ಷರವಲ್ಲ (ಕವನ ಸಂಕಲನ-2018), ಅಯ್ದು ರುಪಾಯಿ ಮತ್ತು ಇತರ ಕತೆಗಳು ( ಕಥಾ ಸಂಕಲನ-2021) ...
READ MORE