’ನನ್ನೊಳಗಿನೊಳಗಿನ ನಾನು’ ಅನುಸೂಯಾ ಕ. ಎಲಿಗಾರ ಅವರ ಕವನಸಂಕಲನ. ಗೆಳೆತನ, ಸಂಸಾರ, ಸಮಾಜ, ಯುವಜನತೆ ಪ್ರೀತಿ, ತೊಳಲಾಟ ಮಕ್ಕಳ ಬಾಲ್ಯ, ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜ ಕುರಿತು ಹೀಗೆ ಹಲವಾರು ವಿಭಿನ್ನ ವಿಷಯಗಳ ಕುರಿತಾಗಿ ಕವನಗಳು ರಚಿತವಾಗಿದೆ.
ಕವಯತ್ರಿ ಶಿಕ್ಷಕಿ. ಮಕ್ಕಳ ಕುರಿತಾಗಿ ಕೆಲವು ಕವನಗಳು ಸಹ ಸಂಕಲನದಲ್ಲಿ ದಾಖಲಾಗಿದೆ. ಸಮಾಜದ ಅಂಕುಡೊಂಕು ತಿದ್ದುವ ಗುರುತರ ಜವಾಬ್ದಾರಿಯನ್ನು ತಮ್ಮ ಪ್ರಥಮ ಕವನಸಂಕಲನದಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ.
ಲೇಖಕಿ ಅನಸೂಯಾ ಕ. ಎಲಿಗಾರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವರು. ಬರವಣಿಗೆ ಅವರ ಆಸಕ್ತಿ. ಸುಮಾರು 14 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಕೃತಿಗಳು: ನನ್ನೊಳಗಿನೊಳಗಿನ ನಾನು (ಕವನ ಸಂಕಲನ) ...
READ MORE