‘ಹಿಪ್ಪೆ ಹೂವಿನ ಘಮಲು’ ಮಂಜುಳಾ ಹುಲಿಕುಂಟೆಯವರ ಎರಡನೇ ಕವನ ಸಂಕಲನವಾಗಿದೆ. ಇದಕ್ಕೆ ಹಿರಿಯ ಕವಿ ಸುಬ್ಬು ಹೊಲೆಯಾರ್ ಅವರು ಬರೆದ ಬೆನ್ನುಡಿ ಬರಹ ಹೀಗಿದೆ; ಈ ಸಂಕಲವನ್ನು ಓದಿದಾಗ ಬ್ರೆಕ್ಟ್ ನ ಕವಿತೆಯ ಸಾಲು ನೆನಪಾಗುತ್ತದೆ "ನೀರು ಅತ್ಯಂತ ಮೃದು ಹಾಗೂ ಕಠಿಣವಾದದ್ದು" ಹಾಗೆಯೇ ಹೆಣ್ಣು ಅತ್ಯಂತ ಕಠಿಣ ಮತ್ತು ಮೃದು ಎನ್ನುವುದು ಮಂಜುಳ ಅವರ ಈ ಸಂಕಲನದಿಂದ ತಿಳಿಯುತ್ತದೆ' ಎಂದಿದ್ದಾರೆ. ಇವರ ಕಾವ್ಯದಲ್ಲಿ ಸಮಕಾಲೀನ ಮತ್ತು ಸಾರ್ವಕಾಲಿಕ ಹೆಣ್ಣುಮಕ್ಕಳ ಸುಖ ದುಃಖಗಳನ್ನು ಪ್ರೇಮದ ಬೊಗಸೆಯಲ್ಲಿ ಅಥವಾ ಬಟ್ಟಲಲ್ಲಿ ಹಿಡಿದಾಗ ಅಲ್ಲಿ ಸಿಹಿ, ಕಹಿ ತುಂಬಿ ತುಳುಕದ ಹಾಗೆ ನೋಡಿಕೊಳ್ಳುವುದೇ ಕಾವ್ಯದ ಮುಖ್ಯ ಗುಣ. ಸಂಕಲನದಲ್ಲಿ ಸೂಕ್ಷ್ಮ ಸಂವೇದನೆ ಹಾಗೂ ಸಂಕೇತಗಳು ಮತ್ತು ರೂಪಕಗಳು ಸಹಜವಾಗಿ ಮಿಳಿತವಾಗಿವೆ ಹಾಗೇ ಅಲ್ಲಲ್ಲಿ ಅಮೃತಾ ಪ್ರೀತಂ ಅವರ ಭಾವಗಳು ಸುಳಿದಾಡಿದಂತೆ ಕೆಲವು ಕವಿತೆಗಳಲ್ಲಿ ಕಾಣಿಸುತ್ತದೆ. ಬರೆಯುವ ತೀವ್ರತೆಯನ್ನು ಸಮಚಿತ್ತದಿಂದ ಗ್ರಹಿಸಿದರೆ ಕಾವ್ಯ ಹರಳುಗಟ್ಟುತ್ತದೆ. 'ಧರ್ಮದ ಮಾತು ಸುಮ್ಮನೆ ಎದೆಗಿರಿಯುತ್ತದೆ' ಎನ್ನುವ ಸಾಲುಗಳಲ್ಲಿ ಧರ್ಮ ಜಾತಿಗಳ ನಡುವೆ ಕಲಹ ಉಂಟುಮಾಡುತ್ತಿರುವವರ ವಿರುದ್ಧ ಈ ಪ್ರತಿರೋಧದ ಸಾಲುಗಳು ಮೂಡಿ ಬಂದಿದೆ. ಈ ಪ್ರತಿರೋಧವು ಕವಿ ತನ್ನ ಮುಷ್ಟಿಹಿಡಿದು ಮುನ್ನುಗ್ಗುವ ಹಾಗೆ ಕಾವ್ಯ ಒಂದು ಅಸ್ತ್ರವಾಗಿ ಕೆಲಸಮಾಡುತ್ತದೆ ಎನ್ನುವ ಎಚ್ಚರದ ದನಿ ಈ ಸಂಕಲನದಲ್ಲಿದೆ. ಕಾವ್ಯಕ್ಕೆ ಭಾವ ಮತ್ತು ವಿಚಾರ ಮುಖ್ಯವೋ ಮುಗ್ಧತೆಯೂ ಅಷ್ಟೇ ಮುಖ್ಯ. ಜನ ಒಳ್ಳೆಯವರು ಎನ್ನುವ ಕವಿತೆ ಮನುಷ್ಯನ ನೈತಿಕತೆಯನ್ನು ಪ್ರಶ್ನಿಸುತ್ತಲೇ ಮುಜುಗರವನ್ನು ಅನುಭವಿಸುವ ಈ ಕವಿತೆ ಇಷ್ಟವಾಗುತ್ತದೆ ಎಂದಿದ್ದಾರೆ.
ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸಂವಾದ ಸಂಸ್ಥೆಯಲ್ಲಿ ‘ಯುವಜನರ ...
READ MORE