‘ಜೇನ ಹನಿಗಳು’ಜಿ.ಎಸ್ ಕಲಾವತಿ ಮಧುಸೂದನ ಅವರ ಹನಿಗವನ ಸಂಕಲನವಾಗಿದೆ. ಜೇನಹನಿಗಳು ಜೇನು ಪ್ರಕೃತಿಯಲ್ಲಿ ಸಿಗುವ ಅನನ್ಯ ದ್ರವ್ಯ"ಅದರಲ್ಲಿ ಸಿಹಿಯಲ್ಲದೇ ಔಷದೀಯ ಚಿಕಿತ್ಸಕ ಗುಣಗಳೂ ಅಡಗಿರುವುದು ಹಾಗೂ ಕೋಮಲವಾದ ವಿಶೇಷ ಸಸ್ಯರಾಶಿಯ ಸುಂದರ ಸಂಗ್ರಹವಾದ ಮಕರಂದವನ್ನು ದುಂಬಿಗಳು ಸಂಗ್ರಹಿಸಿ ತಮ್ಮ ಕುಟುಂಬದ ಸಂತಾನಾಭಿವೃದ್ಧಿಗಾಗಿ ದುಡಿಯುತ್ತವೆ. ಜೇನು 'ಗೂಡು, ಆಹಾರದ ಕಣಜ ನನ್ನ ಒಂದು ಹನಿಗವಿತೆಯನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.
ಜಿ.ಎಸ್.ಕಲಾವತಿಮಧುಸೂದನ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನವರು. ತಂದೆ ಜಿ.ಆರ್.ಶ್ರೀನಿವಾಸಯ್ಯ,ತಾಯಿ ಕೆ.ಪಿ.ರಾಜಮ್ಮ. ಹಿಂದಿ ಭಾಷೆಯಲ್ಲಿ ಬಿ.ಎ, ಬಿ.ಇ.ಎಡ್,ಹಾಗೂ ಸಮಾಜಶಾಸ್ತ್ರದಲ್ಲಿ ಎಮ್.ಎ ಸ್ನಾತಕೋತರ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೋಘವಾಹಿನಿಯಲ್ಲಿ ನಿರ್ದೆಶಕಿಯಾಗಿ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಕಲರವ, ಸಂಕೀರ್ತನಮಾಲ, ಶೃತಿಮಾಲ,ಜೇನಹನಿ,ಅಂತರತಮ ನೀ ಗುರು, ಶ್ರೀರಂಗ ಮಹಾತ್ಮೆ ,ಸೌಗಂಧಿಕ, ಮಧುಲತೆ,ಬೆಳ್ಳಿಬಟ್ಟಲೊಳು, ಶ್ರೀ ಶ್ರವಣ ಕೀರ್ತನ,ಸ್ಪಂದನ ಸಿರಿ, ನೆನಪಿನ ಪಯಣ, ಸ್ಪಂದನ,ಅಪರಾಧಿ ನಾನಲ್ಲ . ಪ್ರಶಸ್ತಿಗಳು: “ಸಮಾಜ ಸೇವಾ” ಪ್ರಶಸ್ತಿ, “ಸಾಹಿತ್ಯ ಮತ್ತು ಸಾಂಸ್ಕೃತಿಕ ಭೂಷಣ”ಪ್ರಶಸ್ತಿ , ನಾರಿಶಕ್ತಿ ರಾಜ್ಯ ಪ್ರಶಸ್ತಿ, ‘ಮಹಿಳಾ ...
READ MORE