ನೂರು ಪುಟಾಣಿ ಎಂಬುದು ಜಿ.ಪಿ. ರಾಜರತ್ನಂ ಅವರ ಮುಕ್ತಕಗಳ ಸಂಗ್ರಹ ಸಂಕಲನ. ಚಾಟು ಅಥವಾ ಮುಕ್ತkಗಳನ್ನು ಎಪಿಗ್ರಂ ಎಂದೂ ಕರೆಯಲಾಗುತ್ತದೆ. ಚಾಟುವಿಗೆ ಇಂತಹದ್ದೇ ರಸ ಇರಬೇಕೆಂದಿಲ್ಲ. ಸ್ವರೂಪ ಸಣ್ಣದಾಗಿರಬೇಕು. ಹೇಳುವ ರೀತಿಯಲ್ಲಿ ಚಮತ್ಕಾರ ಇರಬೇಕು. ಧ್ವನಿ ತುಂಬಿರಬೇಕು ಎಂದು ಜಿ.ಪಿ. ರಾಜರತ್ನಂ ಅವರೇ ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೃತಿಯಲ್ಲಿ ಸಂಸ್ಕೃತದಿಂದ, ಕನ್ನಡದ ಕವಿಗಳಿಂದ, ಗ್ರೀಕ್ ಅಂಥಾಲಜಿಯಿಂದ ಹಾಗೂ ತಮ್ಮವೇ ಆದ ಮುಕ್ತಕಗಳು ಸೇರಿ ಒಟ್ಟು 100 ಮುಕ್ತಕಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE