ಕನ್ನಡಿ

Author : ಮಧು ಕೋಡನಾಡು

Pages 76

₹ 100.00




Year of Publication: 2021
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: ಬೆಂಗಳೂರು
Phone: 9945939436

Synopsys

ಕವಿ ಮಧು ಕೋಡನಾಡು ಅವರ ಕವನ ಸಂಕಲನ ‘ಕನ್ನಡಿ’. ಈ ಸಂಕಲನವು ಓದುಗರ ಮನದಾಳದ ಭಾವಗಳ ಕನ್ನಡಿ. ಇಲ್ಲಿ ಪ್ರೀತಿ-ಪ್ರೇಮ, ಸರಸ-ವಿರಸ, ಭಕ್ತಿ, ಮನಸ್ಸಿನ ತೊಳಲಾಟ-ತಾಕಲಾಟ, ಹತಾಶೆ-ನಿರಾಸೆ ಇತ್ಯಾದಿ ಭಾವಗಳನ್ನು ಕವನಗಳ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನ ಕವಿ ಮಧು ಕೋಡನಾಡು ಅವರದ್ದು. ಮೂಲತ: ಸರ್ಕಾರಿ ಉದ್ಯೋಗಿಯಾಗಿದ್ದು, ಹವ್ಯಾಸಿ ಬರಹಗಾರರಾಗಿ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರ ಮೊದಲ ಕವನ ಸಂಕಲನವಿದು. ಇಲ್ಲಿನ ಕವಿತೆಗಳು ಒಬ್ಬ ಕವಿ ಹೃದಯದ ಆಂತರ್ಯವನ್ನು ತೋರಿಸುತ್ತವೆ. ಇವರ ಸುಮಾರು 30 ಕ್ಕೂ ಹೆಚ್ಚು ಕವನಗಳು ಈಗಾಗಲೇ ಹಾಡುಗಳಾಗಿ ಜನಪ್ರಿಯವಾಗಿವೆ. ಇದೇ ಕವನ ಸಂಕಲನದ ಆಯ್ದೆ ಗೀತೆಗಳು ಶ್ರೀ ಪುತ್ತೂರು ನರಸಿಂಹ ನಾಯಕ್ ಇವರ ಸಂಗೀತ ನಿರ್ದೇಶನದಲ್ಲಿ ‘ಒಲವಿನ ಸಿರಿ’ ಎಂಬ ಧ್ವನಿಸುರುಳಿಯಾಗಿ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಈ ಕವನ ಸಂಕಲನ ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಹಾಗೂ ಖ್ಯಾತ ಚಿತ್ರ ಸಾಹಿತಿ ಶ್ರೀ ಕೆ. ಕಲ್ಯಾಣ್ ಇವರುಗಳಿಂದ ಲೋಕಾರ್ಪಣೆಯಾಗಿದ್ದು ಕೂಡ ವಿಶೇಷ. ಈ ಸಂಕಲನ ಒಟ್ಟು 65 ಕವಿತೆಗಳನ್ನೊಳಗೊಂಡಿದೆ. ಪುಸ್ತಕದ ಪ್ರತಿಗಳು ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಂಗಳೂರು 9945939436 ಇವರಲ್ಲಿ ಲಭ್ಯವಿದೆ.

About the Author

ಮಧು ಕೋಡನಾಡು

ಮಧು ಕೋಡನಾಡು ಅವರು ಮೂಲತಃ ಮಲೆನಾಡಿನವರಾಗಿದ್ದು, ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿ. ಕುವೆಂಪು ಅವರ ಕುಪ್ಪಳ್ಳಿಗೆ ಅತೀ ಸಮೀಪದಲ್ಲಿರುವ ನರಸಿಂಹರಾಜಪುರದಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ನರಸಿಂಹರಾಜಪುರ, ಶಿವಮೊಗ್ಗ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಲ್ಲಿಯೇ ಮುಗಿಸಿಕೊಂಡರು. ಇವರು ನಂತರದಲ್ಲಿ ಬೆಂಗಳೂರಿನಲ್ಲಿ ವಾಸಿಸಲಾರಂಭಿಸಿದರು. ಅತ್ಯಂತ ಸೂಕ್ಷ್ಮ ಕಾವ್ಯ ಸಂವೇದನೆಯನ್ನು ಹೊಂದಿರುವ ಇವರ ಸಾಕಷ್ಟು ಕವಿತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನಪ್ರಿಯವಾಗಿವೆ. ಇವುಗಳ ಪೈಕಿ ಆಯ್ದ ಕವಿತೆಗಳ ಸಂಕಲನವೇ ಇವರ ಚೊಚ್ಚಲ ಕೃತಿ ‘ಕನ್ನಡಿ’. ಇದಲ್ಲದೇ, ಇವರ ಸುಮಾರು 30 ಕ್ಕೂ ಹೆಚ್ಚು ಕವಿತೆಗಳು ನಾಡಿನ ಹೆಸರಾಂತ ಸಂಯೋಜಕರು ಹಾಗೂ ಗಾಯಕರುಗಳಾದ ಪುತ್ತೂರು ನರಸಿಂಹ ...

READ MORE

Related Books