ತಮಾಷಾ

Author : ವಿಕ್ರಮ ವಿಸಾಜಿ

Pages 72

₹ 45.00




Year of Publication: 2000
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-585106

Synopsys

ಇಪ್ಪತ್ತನೆಯ ಶತಮಾನದ ತುತ್ತತುದಿಯಲ್ಲಿ, ಆಧುನಿಕ ಕನ್ನಡ ಸಾಹಿತ್ಯದ ನಾಲ್ಕನೆಯ ತಲೆಮಾರಿನ ಕಾವ್ಯ ಸಂದರ್ಭದಲ್ಲಿ, ಹೊಸದನಿಗಳಿಗೆ ಕಾತರಿಸುವ ಕಿವಿಗೆ, ಕರ್ನಾಟಕದ ಮೂಲೆಯಂತಿರುವ ಬೀದರ್‌ನ ಪರಿಸರದಲ್ಲಿ ಹೊಮ್ಮುವ ವಿಕ್ರಮ ವಿಸಾಜಿಯ ಕವಿತೆಯ ದನಿ, ತನ್ನ ಹೊಸತನ ಹಾಗೂ ಲವಲವಿಕೆಯಿಂದ ನಾಳಿನ ಕವಿತೆಯ ಬಗ್ಗೆ ಭರವಸೆಯನ್ನು ಮೂಡಿಸು ವಂಥದಾಗಿದೆ.

'ಮೊಗಲ್ ಅಂತಃಪುರದ ಆರ್ತನಾದಗಳು' 'ಬಾಜೀರಾಯನ ಪ್ರೀತಿ' 'ರಾಣಾಬಾಯಿಯ ಹಾಡು' 'ಗವಾನನ ಮದರಸಾ' ನದೀ ತೀರಕ್ಕೆ ಬಂದ ಗೌತಮ (ಮಾರ್ಕ್ಸ್ನ ನೆನಪಿನಂಗಳದಲ್ಲಿ ಜೆನ್ನಿ' - ಇಂಥ ಕವಿತೆಗಳ ಮೂಲಕ ವಿಸಾಜಿ ಇತಿಹಾಸ ಹಾಗೂ ಪುರಾಣಗಳನ್ನು ವರ್ತಮಾನದ ನೆಲೆಯಲ್ಲಿ ಅರ್ಥೈಸುವ ಕ್ರಮ ಸಕಾಲಿಕವಾಗಿದೆ. ಯಾಕೆಂದರೆ, ಕನ್ನಡ ಕವಿತೆ ಕಳೆದ ಒಂದೂವರೆ ದಶಕಗಳ ಕಾಲಮಾನದಲ್ಲಿ ತನ್ನ ಪ್ರೇರಣೆಗೆ ಹಿಂದಿನಂತೆ ಅನ್ಯ ದೇಶೀಯವಾದ ಯಾವ ಮಾದರಿಗಳನ್ನೂ ಅವಲಂಬಿಸದೆ , ತಾನು ನಿಂತ ನೆಲದ ಜಾನಪದ-ಪುರಾಣ-ಇತಿಹಾಸಗಳಲ್ಲಿ ಬೇರೂರಿ ಅರಳಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಆದರೆ ಇಂಥ ವಸ್ತುಗಳ ನಿರ್ವಹಣೆಯಲ್ಲಿ ತಕ್ಕ ಕಲಾತ್ಮಕತೆ ಹಾಗೂ ವಾಚ್ಯವಿಮುಖತೆಯಿಂದ ಅಭಿವ್ಯಕ್ತಿಗೆ ಪ್ರಾಪ್ತವಾಗುವ ಧ್ವನಿ ರಮ್ಯತೆಯ ಕಡೆ ಈ ಕವಿ ಇನ್ನಷ್ಟು ಗಮನ ಕೊಡುವುದು ಅಗತ್ಯವಾಗಿದೆ. ಅಷ್ಟೆ ಅಲ್ಲ, ಇತ್ತೀಚೆಗಿನ ಬರೆಹಗಾರರು ತಾವು ಯಾವ ಭಾಷೆಯ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದಾರೆಯೋ, ಆ ಸಾಹಿತ್ಯ ಪರಂಪರೆಯೊಂದಿಗೆ ನಿರಂತರವಾದ ಸಂವಾದವನ್ನೇರ್ಪಡಿಸಿಕೊಳ್ಳುವುದು ತಮ್ಮ ಸೃಜನಶೀಲತೆಯ ನವೀಕರಣಕ್ಕೆ ಎಷ್ಟೊಂದು ಮುಖ್ಯವಾದದ್ದು ಎಂಬುದನ್ನು ತಿಳಿದುಕೊಂಡಂತೆ ತೋರುವುದಿಲ್ಲ.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books