‘ಹೆಜ್ಜೆಗಳೆಲ್ಲ ಮಾತನಾಡಿದಾಗ’ ಸಖಿ ಸಖ್ಯ ಮುಖಾಮುಖಿ ಕೃತಿಯು ಡಾ.ಜಿ. ವೀರಭದ್ರಗೌಡ ಅವರ ಸಂಪಾದಕತ್ವದ ಕವನಸಂಕಲನವಾಗಿದೆ. ಸತ್ಯಾನಂದ ಪಾತ್ರೋಟರ ಆಯ್ದ ಕವಿತೆಗಳನ್ನು ಇಲ್ಲಿ ಕಾಣಬಹುದು. ಪ್ರೀತಿಗೆ ಅನಂತ ಮುಖ, ಜಗತ್ತು ನಿಂತಿದ್ದೇ ಪ್ರೀತಿಯ ಮೇಲೆ, ನಂಬುಗೆಯ ಮೇಲೆ, "ಯಾವುದೇ ಕಾಲದಲ್ಲಿಯೂ ದ್ವೇಷ, ದ್ವೇಷವನ್ನು ಕಡಿಮೆ ಮಾಡುವುದಿಲ್ಲ. ಪ್ರೀತಿ ದ್ವೇಷವನ್ನು ಕಡಿಮೆ ಮಾಡುತ್ತದೆ. ಇದೇ ಧರ್ಮ" ಬುದ್ಧನ ಈ ಮಾತು ಬೆನ್ನಿಸಿಕೊಂಡಿದ್ದರೆ ಜಗತ್ತಿನ ತಲ್ಲಣಗಳು, ಅನುಮಾನ, ಆತಂಕಗಳು ದೂರಾಗಿ ಮನುಷ್ಯ, ಮನುಷ್ಯರ ಮಧ್ಯೆ ಯಾವುದೇ ತರಹದ ಬಿರುಕುಗಳು ಇರುತ್ತಿರಲಿಲ್ಲ. (ನದಿಗೊಂದು ಕನಸು ಮತ್ತು ಅವಳು- ನನ್ನ ಮಾತುಗಳಿಂದ). ಇಂತಹ ಆಲೋಚನೆಗಳ ಹಿನ್ನೆಲೆಯಲ್ಲಿ ಬರೆದ ಕವಿತೆಗಳಿವು, ಪ್ರೀತಿಗೆ ಅಗಾಧವಾದ ಶಕ್ತಿ ಇದೆ. ಸೂರ್ಯ, ಭೂಮಿ, ಚಂದ್ರರು ಇದಕ್ಕೆ ಹೊರತಾಗಿಲ್ಲ, ಭಿನ್ನರಾಗಿಲ್ಲ. ಈ ಮೂವರ ಮಧ್ಯೆ ಆರೋಗ್ಯಕರ, ಅನ್ನೋನ್ಯ, ಅವಿನಾಭಾವ ಸಂಬಂಧ ಇದೆ. ಹೀಗಾಗಿಯೇ ಜಗತ್ತು ತನ್ನದೇ ಆದ ಲಯ, ಬದ್ಧತೆಯಿಂದ, ಸದಾ ಜೀವಂತಿಕೆಯಿಂದ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೆ ನಿತ್ಯ ಚೇತೋಹಾರಿಯಾಗಿವೆ. ಪ್ರೀತಿಸದೇ ಇರುವವರು ಈ ಜಗತ್ತಿನಲ್ಲಿ ಯಾರಾದರೂ ಇರುವರೇ ? ಅದರ ಸೆಳೆತವೇ ಅಂತದ್ದು. ಇದಕ್ಕಿಲ್ಲ ವಯಸ್ಸಿನ ಅಂತರ, ಜಾತಿ, ಮತ, ಪಂಥ, ಪಂಗಡ, ಧರ್ಮ, ಗಡಿ, ಭಾಷೆಗಳ ಬಂಧನ. ಪ್ರೀತಿ ನಿತ್ಯ ನೂತನೆ, ತನ್ನ ಬತ್ತದ ಸೆಲೆಯಿಂದ, ಶಕ್ತಿಯಿಂದ ಹೊಸ, ಹೊಸತು ಲೋಕವನ್ನು ಕಣ್ಣಿದರು. ತಂದು ನಿಲ್ಲಿಸುತ್ತಲೇ ಇದೆ. ಹಸಿರು, ಹೂವು, ಕಾಯಿ, ಹಣ್ಣು ನೀಡುತ್ತಲೇ ಇದೆ. ಆಗೊಮ್ಮೆ ಈಗೊಮ್ಮೆ ನೋವು, ದುಃಖ, ದುಮ್ಮಾನ ದುಗುಡ ಎದುರಾದರೂ; ಅದರ ಸ್ಪರ್ಶದಿಂದ ವಿಮುಖರಾಗುವದು ಅಸಾಧ್ಯವೆಂಬುದೇ ನನ್ನ ಭಾವನೆ, ಪ್ರಕೃತಿಯ ಪ್ರತಿ ಸ್ಥರದಲ್ಲಿ ಇದನ್ನು ಕಾಣಬಹುದು.
ಜಿ. ವೀರಭದ್ರಗೌಡ ಅವರು ತೆಲುಗಿನ ಖ್ಯಾತ ಕಥೆಗಾರ್ತಿ ಓಲ್ಗಾ ಅವರ ರಾಜಕೀಯ ಕಥೆಗಳು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಹೆಜ್ಜೆಗಳೆಲ್ಲ ಮಾತನಾಡಿದಾಗ ...
READ MORE