'ನೀಲ ಕಡಲ ಬಾನು' ಜಯಲಕ್ಷ್ಮಿ ಅವರ ಚೊಚ್ಚಲ ಕವನ ಸಂಕಲನ. ಈ ಕವಿತೆಗಳ ಹಿಂದೆ ಮತ್ತೊಂದು 'ಅಕ್ಕ'ನ ಮನಸ್ಸು ಕೆಲಸ ಮಾಡಿದೆ. ಚೌಕಟ್ಟಿನೊಳಗೇ ಜೀವಿಸುತ್ತಾ ಅದನ್ನು ಒಡೆವ ಪ್ರಯತ್ನ ಇಲ್ಲಿ ಕಾಣಸಿಗುತ್ತದೆ.
ಸಾಮಾಜಿಕ ಅಲಿಖಿತ ನಿಯಮಗಳನ್ನು ಮೀರುವ ಗಂಡು-ಹೆಣ್ಣಿನ ತಲ್ಲಣಗಳನ್ನು ಇಲ್ಲಿಯ ಕವಿತೆಗಳು ಪ್ರತಿನಿಧಿಸುತ್ತವೆ. ಮನಸೊಂದು ತನ್ನನ್ನು ವಿಮರ್ಶೆಗೆ ಒಡ್ಡಿಕೊಳ್ಳುವ ಸಂದರ್ಭಗಳು ಇಲ್ಲಿವೆ. ಕವಿತೆಗಳಲ್ಲಿ ಏಕಾಂಗಿಯಾಗಿ ಅಲೆವ ಪ್ರಜ್ಞೆಯೊಂದು ಚಿತ್ರಿಸುವ ಆಧುನಿಕ ಮಹಿಳೆಯ ಬದಲಾಗುತ್ತಿರುವ ಜಗತ್ತು ಬಹು ಮುಖ್ಯವಾದ ಸಂಗತಿಯಾಗಿದೆ. ಮನಸ್ಸು ಪ್ರಶ್ನಿಸುವಂತೆ ‘ಬದುಕಲಾರದ ಸಂಬಂಧ ಹೆಸರಿಲ್ಲದೆ? ಉಳಿಯಲಾರದೆ ಅನುಬಂಧ ಮುದ್ರೆಯಿಲ್ಲದೆ?’ ಇಂತಹ ಸಾಲುಗಳು ಓದುಗರನ್ನು ತಟ್ಟುತ್ತವೆ.
ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು. ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ...
READ MORE