ಮೋಹದ ಮೋಡಗಳು

Author : ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್

Pages 72

₹ 100.00




Year of Publication: 2020
Published by: ಆತ್ಮೀಯ ಪ್ರಕಾಶನ
Address: ಕಣದ್ಮನೆ ನವಿಲೇಹಾಳ್, ಚೆನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
Phone: 9743930178

Synopsys

ಮೋಹದ ಮೋಡಗಳು-ಲೇಖಕ ಷಕೀಬ್ ಎಸ್.ಕಣದ್ಮನೆ, ನವಿಲೆಹಾಳ್ ಅವರ ಕವಿತಾ ಸಂಕಲನ. ವಯೋ ಸಹಜ ಪ್ರೀತಿ-ಪ್ರೇಮದ ಕವಿತೆಗಳು ಸೇರಿದಂತೆ . ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುವ ಕವಿತೆಗಳಿವೆ. 

ಸಾಹಿತಿ ಸಿದ್ದರಾಮ ಕಾರಣಿಕ ಅವರು ಕೃತಿಗೆ ಮುನ್ನುಡಿ ಬರೆದು ‘ಸಹಜವಾಗಿಯೇ ಇಲ್ಲಿಯ ಬಹುತೇಕ ಕವಿತೆಗಳು ಪ್ರೀತಿ-ಪ್ರೇಮದ ಸುತ್ತಲೇ ಸುತ್ತಿದರೂ ಸಮಾಜದ ವಾಸ್ತವವನ್ನು ಕಂಡುಂಡ ಅನುಭವಗಳೂ ಆದ್ಯತೆ ಪಡೆದುಕೊಂಡಿವೆ. ರೈತ, ಕನ್ನಡತನ, ನಾಡು-ನುಡಿ, ವೀರ ಯೋಧರು, ಭಾರತೀಯತೆ, ಧರ್ಮ ಮೊದಲಾದ ವಿಷಯಗಳ ಮೇಲೂ ಕವಿತೆಗಳು ಪ್ರಸ್ತುತ ಸಂಕಲನದಲ್ಲಿ ಎಡೆ ಪಡೆದುಕೊಂಡಿವೆ. ಆದರೆ ಯಾವುದರ ಬಗ್ಗೆಯೂ ಹುಚ್ಚು ಆವೇಶವಿಲ್ಲ. ಎಲ್ಲವನ್ನೂ ಸಹಜವಾಗಿ ತೆಗೆದುಕೊಳ್ಳುವ ಮನೋಭಾವ ಎದ್ದು ಕಾಣುತ್ತದೆ. ಅಂದರೆ ಬಂಡಾಯದ ಆಶಯಗಳು ತುಂಬ ವಿರಳ ಎನ್ನಬಹುದು. ನವೋದಯ ಸಂಪ್ರದಾಯದಲ್ಲಿ ಇಲ್ಲಿಯ ಕವಿತೆಗಳು ಸ್ಥಾನ ಪಡೆದುಕೊಂಡಿವೆ. “ಧರ್ಮ ಧರ್ಮವೆಂದು ಹೊಡೆದಾಡುವರು ಧರ್ಮದ ತತ್ವ ತಿಳಿಯದವರು ಧರ್ಮದ ಸಾರವನ್ನು ಸಾರಿದರು ಧರ್ಮವನ್ನು ಸ್ಥಾಪಿಸಿದವರು” (ಮೋಹ-ದಾಹ) ಎನ್ನುವ ಮೂಲಕ ಭಾರತ ದೇಶದಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷದ ವಾತಾವರಣ ಕಂಡು ಬರುವುದನ್ನು ಗುರುತಿಸಿರುವ ಕವಿ ಧರ್ಮದ ಬಗ್ಗೆ ಹೊಡೆದಾಡುವುದು ವ್ಯರ್ಥ ಎಂಬ ಭಾವವನ್ನು ಹೊರ ಹಾಕುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

“ಹ್ಯಾಂಗ ಮರೆಯಲಿ ಗೆಳತಿ ನಿನ್ನ ನಾ ಹ್ಯಾಂಗ ಮರೆಯಲಿ ಕುಂತರೂ ನಿಂದೆ ನೆನಪು ನಿಂತರೂ ನಿಂದೆ ನೆನಪು ನನ್ನ ಮನಸೂರೆ ಮಾಡಿತು ಆ ನಿನ್ನ ಕಣ್ಣ ಹೊಳಪು ಹ್ಯಾಂಗ ಮರೆಯಲಿ ಗೆಳತಿ ನಿನ್ನ ನಾ ಹ್ಯಾಂಗ ಮರೆಯಲಿ”ಎಂದು ಕವಿ ಅಲವತ್ತುಕೊಳ್ಳುತ್ತಾರೆ. ನನ್ನೂರು ನವಿಲೂರು, ಮಮತೆಯ ಮಡಿಲು, ಬೆತ್ತಲು, ಕೊನೆ ನಿರ್ಣಯ, ಮೌನ ರಾಗ ಮೊದಲಾದ ಕವಿತೆಗಳು ಗಮನ ಸೆಳೆಯುತ್ತವೆ ಎಂದೂ ಅವರು ಶ್ಲಾಘಿಸಿದ್ದಾರೆ.

ಕೃತಿಗೆ ಬೆನ್ನುಡಿ ಬರೆದ ಡಾ. ಶರೀಪ್ ಹಸಮಕಲ್, ವರ್ತಮಾನದ ಸಂಕಟಗಳನ್ನು ಇಲ್ಲಿಯ ಕವಿತೆಗಳಲ್ಲಿ ವ್ಯಕ್ತಮಾಡಿದ್ದಾಗಿ ಪ್ರಶಂಸಿಸಿದ್ದಾರೆ. 

 

 

About the Author

ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್

ಲೇಖಕ ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಮೂಲತಃ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದವರು. ತಂದೆ - ಷಂಷು ಕೆ. ಬಿ., ತಾಯಿ - ಪರ್ವಿನ್ ಹೆಚ್. ಇವರದು ರೈತ ಕುಟುಂಬ. ಸಿರಿಗೇರಿಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ತರ್ಕಶಾಸ್ತ್ರ ವಿಷಯದಲ್ಲಿ ಶಿಕ್ಷಣ, ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇನಲ್ಲಿ ಪದವಿ ಹಾಗೂ ದಾವಣಗೆರೆ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದಲ್ಲಿ ಈಗ ಸಂಶೋಧನಾ ವಿದ್ಯಾರ್ಥಿ. ‘ಮೋಹದ ಮೋಡಗಳು’ ಅವರ ಚೊಚ್ಚಲ ಕವನ ಸಂಕಲನ. ...

READ MORE

Related Books