‘ಗುರುಗೀತಾ ಪರಿಮಳ’ ಕೃತಿಯು ದೇವೇಂದ್ರ ಮಹಾಸ್ವಾಮಿಗಳ ಗುರುಗೀತೆಗಳಾಗಿವೆ. ಗುರುಗೀತೆಯಲ್ಲಿ ಹೇಳಿದ ಬ್ರಹ್ಮಾನಂದ ಪರಮ ಸುಖದಂ’ ಎಂಬ ಸೂತ್ರರೂಪವಾದ ಸ್ರೋತ್ರಕ್ಕೆ ವಿಶ್ವಕರ್ಮ ಧರ್ಮ ಗುರುಗಳಾದ ದೇವೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಿಗಿಮಠ ಶಹಪುರ ಅವರು ಕನ್ನಡ ಭಾಮಿನಿ ಷಟ್ಪದಿ ಕಾವ್ಯದಲ್ಲಿ ಒಂದೊಂದು ಸೂತ್ರಕ್ಕೂ ಒಂದೊಂದು ಪದ್ಯವನ್ನು ಅದಕ್ಕೆ ಸಂಕ್ಷಿಪ್ತವಾದ ಭಾಷ್ಯ ಬರೆಯುವ ಕೃಪೆ ಮಾಡಿದ್ದಾರೆ. ವಿಶ್ವಕರ್ಮ ಧರ್ಮದ ಪೀಠಾಧಿಕಾರಿಗಳಾಗಿದ್ದರೂ ಅವರು ಕೇವಲ ಧಾರ್ಮಿಕ ಪಾಂಡಿತ್ಯವುಳ್ಳವರಾಗಿರದೆ ಅಧ್ಯಾತ್ಮ ವಿದ್ಯೆಗಳಲ್ಲಿಯೂ ಜ್ಞಾನಿಗಳಾಗಿದ್ದಾರೆ. ಅವರು ಅಧ್ಯಾತ್ಮ ವಿಷಯವನ್ನು ಗಂಟೆಗಟ್ಟಲೇ ಪ್ರವಚನ ಮಾಡಿ ಸಹಸ್ರಾರು ಭಕ್ತರನ್ನು ತಣಿಸಬಲ್ಲರು. ‘ಗುರುಗೀತಾ ಪರಿಮಳ’ ವೆಂಬ ಹೆಸರಿನಿಂದ ಹೊರ ಬಂದ ಈ ಪುಟ್ಟ ಕೃತಿಯು ಗಾತ್ರದಲ್ಲಿ ಚಿಕ್ಕದಾದರೂ ಮುಮುಕ್ಷಗಳಿಗೆ ಶ್ರೀಗುರುವಿನ ಅರಿವನ್ನು ತಂದು ಕೊಡುವಲ್ಲಿ ಇದೊಂದು ಮಹಾನ್ ಗ್ರಂಥವಾಗಿದೆ ಎನ್ನಬಹುದು.
ದೇವೇಂದ್ರ ಮಹಾಸ್ವಾಮಿಗಳು ಮೂಲತಃ ಶಹಪುರದವರು. ವಿದ್ವತ್ತು ಹಾಗೂ ಆಧ್ಯಾತ್ಮದಲ್ಲಿ ಪರಿಣಿತರು. ಕೃತಿಗಳು : ಗುರುಗೀತಾ ಪರಿಮಳ ...
READ MORE