ಎಳೆ ಮುಗುಳ ಬೆಳಕು ರುದ್ರಪ್ಪ ಹನಗವಾಡಿ ಅವರ ಮೂರನೇ ಕವನಸಂಕಲನ. ಪ್ರೊ. ಕೃಷ್ಣಪ್ಪ ಟ್ರಸ್ಟ್‌ನ ಹಲವಾರು ಸಮಾಜಮುಖಿ ಕಾರ್ಯಯೋಜನೆಗಳಲ್ಲಿ ಪ್ರೊ. ಬಿ.ಕೆ. ಅವರ ಚಿಂತನೆಗಳು ಮತ್ತು ತತ್ವ ಸಿದ್ಧಾಂತಗಳುಳ್ಳ ಸಾಹಿತ್ಯಗಳನ್ನು ಪ್ರಕಟಿಸುವುದು, ಪ್ರದರ್ಶಿಸುವುದು, ಮಾರಾಟ ಮತ್ತು ವಿತರಿಸುವುದೂ ಪ್ರಮುಖವಾದುದಾಗಿದೆ. ಅದರಂತೆ ರುದ್ರಪ್ಪ ಹನಗವಾಡಿ ಅವರು ವಿವಿಧ ಪತ್ರಿಕೆಗಳಿಗಾಗಿ ಬರೆದ ಪ್ರಕಟಿತ ಕವನಗಳ ಜೊತೆಗೆ, ಅನೇಕ ಹೊಸ ಕವನಗಳನ್ನು ಒಗ್ಗೂಡಿಸಿಕೊಂಡು “ಎಲೆ ಮುಗುಳ ಬೆಳಕು” ಎಂಬ ಕವನ ಸಂಕಲನ ಪ್ರಕಟಿಸಲು ನನಗೆ ಅತ್ಯಂತ ಹರ್ಷವೆನಿಸುತ್ತದೆ. ಹನಗವಾಡಿ ಅವರು ಯುವಕರಾಗಿದ್ದಾಗಿನಿಂದಲೂ ಬರೆಯುವ ಹವ್ಯಾಸವನ್ನು ಹಚ್ಚಿಕೊಂಡವರು. ಪಾಠ ಮಾಡುತ್ತಾ, ಓದುತ್ತಾ, ಬರೆಯುತ್ತಾ ಸಾಮಾನ್ಯ ಜನರ ದಿನನಿತ್ಯದ ಸಂಘರ್ಷದ ಬದುಕಿನೊಂದಿಗೆ ಸಂವಹಿಸುತ್ತಾ ಬೆಳೆದವರು. ಗ್ರಾಮೀಣ ಬದುಕಿನೊಂದಿಗೆ, ಮಣ್ಣಿನ ಮಕ್ಕಳೊಂದಿಗೆ ಉತ್ತು ಬಿತ್ತು ಹೊತ್ತು ಫಲಕಂಡು ಸಂಭ್ರಮಿಸಿದವರು. ತಮ್ಮ ಹೊಲ, ಗೇಣಿ ಹೊಲಗಳಲ್ಲಿ ದುಡಿದು, ಕೃಷಿಕೂಲಿಕಾರರ, ರೈತರ, ಮಹಿಳಾ ಕೂಲಿಕಾರರ ಮತ್ತು ಬಾಲ ಕಾರ್ಮಿಕರ, ನೋವು, ಸಂಕಷ್ಟ, ಬಂಗಬವಣೆಯನ್ನು ಜೊತೆಯಾಗಿ ಎದುರಿಸಿದವರು. ಆದ್ದರಿಂದಲೇ ಅವರ ಬಹಳಷ್ಟು ಕವನಗಳು ಸಾಮಾನ್ಯ ಜನರ ಬದುಕಿನ ಬವಣೆಯನ್ನು ಕುರಿತದ್ದೇ ಆಗಿದೆ. ಇದರಲ್ಲಿರುವ ಒಟ್ಟು 81 ಕವನಗಳಲ್ಲಿ “ನೇಗಿಲಯೋಗಿ, ಬ್ಯಾಂಡ್ ಬಾರಿಸುವವರು, ಬಿಕ್ಕಳಿಕೆಯಲಿ ಬಾಗಿದವರು, ಬೇರುಬಿಟ್ಟು ಬೆಳೆಯಬೇಕು, ಅವನು, ಸ್ವಗತ, ಹೋದವರ ನೆನೆದು, ಪೂನಾದಿಂದ ಊನಾದವರೆಗೆ, ಒಡಲುರಿಯಲ್ಲಿ, ನಮ್ಮೂರ ವೀಳ್ಯಾದ ಎಲೆ' ಇನ್ನೂ ಮುಂತಾದ ಕವನಗಳು ಶ್ರಮಜೀವಿಗಳು, ದುಡಿದುಣ್ಣುವವರನ್ನೇ ಕುರಿತದ್ದಾಗಿವೆ. ಎಂದು ಇಂದಿರಾ ಕೃಷ್ಣಪ್ಪ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ರುದ್ರಪ್ಪ ಹನಗವಾಡಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಳಿಕ ಕರ್ನಾಟಕ ಆಡಳಿತ ಸೇವೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 'ಸೆಳೆತ' - ಕವನ ಸಂಕಲನ 2010 'ಊರು – ಬಳಗ' ಕವನ ಸಂಕಲನ 2013 ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ‘ಎಲೆ ಮುಗಿಲ ಬೆಳಕು' ಕವನ ಸಂಕಲನ 2021, 'ಋಣದ ಗಣಿ' ಆತ್ಮಕಥೆ 2021, ಇವರ ಕೃತಿಗಳು. ಸಂಪಾದನೆ: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬಿ.ಆರ್.ಪಿ. 'ದಶಮಾನ' ಸಂಚಿಕೆ 1979 .ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ 'ಅಭಿವೃದ್ಧಿ' ವಿಶೇಷ ಸಂಚಿಕೆ ...
READ MORE