ಬಹುರೂಪಿ (ಕವನ ಸಂಕಲನ)

Author : ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

Pages 92

₹ 90.00




Year of Publication: 2021
Published by: ನಂದನವನ ಪ್ರಕಾಶನ
Address: ಶ್ರೀರಾಮನಹಳ್ಳಿ, ಸಸಲು, ದೊಡ್ಡ ಬಳ್ಳಾಪುರ ತಾಲ್ಲೂಕು, ಬೆಂಗಳೂರು ರೂರಲ್ ಜಿಲ್ಲೆ-561204
Phone: 9844673976

Synopsys

‘ಬಹುರೂಪಿ’ -ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರ ಕವನಸಂಕಲನ.  ಕವಿ ತಮ್ಮ ಕವನಗಳಲ್ಲಿ ಹೇಳುವಂತೆ ಬದುಕಿನ ಓಘದಲ್ಲಿ ಆಗಾಗ ಸುಸ್ತಾಗುತ್ತದೆ. ಆಗಾಗ ನಿಲ್ಲಬೇಕಾದ ಪ್ರಸಂಗಗಳು ಬರುತ್ತದೆ. ಈ ಎಲ್ಲ ವಿಚಾರಗಳು ನಮ್ಮೊಳಗೆ ಮಾತಿಗಿಳಿದಾಗ ಒಡಮೂಡಿದ ಅನುಭವದ ಸಾಲುಗಳಂತಿವೆ. ‘ಅನುಸ೦ಧಾನ’ ಅನ್ನುವಂತದ್ದು ಚಿನ್ನು ಪ್ರಕಾಶರ ಪದ್ಯಗಳ ಮುಖ್ಯ ಅಂಶವಾಗಿದೆ. ಇಲ್ಲಿ ಸಂವಾದವಿದೆ, ಒಂದಿಷ್ಟು ಜಗಳವಿದೆ, ಒಂದಿಷ್ಟು ಬೇಡಿಕೆಯಿದೆ, ಒಂದಿಷ್ಟು ತಕರಾರುಗಳಿವೆ. ಇದನ್ನೆಲ್ಲಾ ಸಾಮಾನ್ಯನೊಬ್ಬನ್ನು ನೋಡುವ ರೀತಿಯಲ್ಲಿಯೇ ನೋಡುವುದು ಚಿನ್ನುಪ್ರಕಾಶರಿಗೆ ಸಾಧ್ಯವಾಗಿದೆ ಎಂಬುದು ಬಹಳ ಮುಖ್ಯ ಅಂಶ. ಈ ಪದ್ಯಗಳನ್ನು ಓದುವಾಗ ನೆನಪಿಗೆ ಬರುವ ವಚನಗಳು, ವಚನಗಳಿಗಿರುವ ಲಾಲಿತ್ಯ, ಭಕ್ತಿಪೂರ್ವ ಸಂಬಂಧಗಳು ಭಿನ್ನವೆನಿಸುತ್ತದೆ. ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಈ ಕವಿತೆಗಳಿದ್ದು, ದೇವರ ಬಳಿ ಮಾತನಾಡಲು ಜನರ ಮನದೊಳಗೆ ಪ್ರಾಮಾಣಿಕತೆಯ ಉಸಿರು ಇರಬೇಕಾಗುತ್ತದೆ. ಜೊತೆಗೆ, ದೇವ ಎಂದರೆ ಏನು ಎಂಬ ಎಡಬಿಡಂಗಿತನವಿಲ್ಲದ ಸ್ಪಷ್ಟತೆ ಇರಬೇಕಾಗುತ್ತದೆ ಎನ್ನುತ್ತಾರೆ ಕವಿ.

About the Author

ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

ಲೇಖಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿಯವರು.ಎಂ.ಎ,ಎಂ.ಫಿಲ್ (ಆಂಗ್ಲ ಸಾಹಿತ್ಯ) ಪದವೀಧರರು. ಜನಪದ ಗಾಯಕ,  ರಂಗಭೂಮಿ ಕಲಾವಿದ ಮತ್ತು ‌ರಂಗ‌ನಿರ್ದೇಶಕರೂ ಆಗಿದ್ದಾರೆ. ಕೃತಿಗಳು: ಅಂತಃಪುರ ( ಕವನ ಸಂಕಲನ-2010) ನೇಸರನ ಛಾಯೆ (ಕವನ ಸಂಕಲನ -2015), ಪಡುವಣ ದಿಕ್ಕಿನಲಿ (ನಾಟಕ-2016), ನಿರ್ದೇಶಿಸಿದ ನಾಟಕಗಳು; ತಮ್ಮದೇ ನಾಟಕ ಪಡುವಣ ದಿಕ್ಕಿನಲಿ, ನಾವು ನಾಗರೀಕರು -ಅಪ್ಪ ಅಂದರೆ ಆಲದ ಮರ-ಕಂಜೂಸ್ ಕರಿಯಪ್ಪ, ಚಂಪಾ ಅವರ ಅಪ್ಪ, ಡುಂಡಿರಾಜ್ ಅವರ ಹುಡುಕಾಟ- ಪರಮೇಶಿ ಪಜೀತಿ. ಅಭಿನಯಿಸಿದ ನಾಟಕಗಳು: ಪೌರಾಣಿಕ ನಾಟಕ, ಕುರುಕ್ಷೇತ್ರ, ಪೂರ್ಣಚಂದ್ರ ತೇಜಸ್ವಿ ಅವರ ಪರಿಸರ ...

READ MORE

Related Books