ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಬರೆದ ಕೃತಿ-ಹೋರಾಟದ ಹೊಸ ಹಾಡುಗಳು. ಲೇಖಕರು ಹೋರಾಟದ ಹಿನ್ನೆಲೆಯಿಂದ ಬಂದವರು. ಹೋರಾಟದ ಕಾವು ಇಳಿದಿದ್ದರೂ ಹಾಡುಗಳು ಮಾತ್ರ ಆ ಚಳವಳಿಯ ಕಾವನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಡುತ್ತಲೇ ಇರುತ್ತದೆ. ಇತಿಹಾಸದಲ್ಲಿ ನಡೆದ ಘೋರ ತಪ್ಪಿನ ಬಗ್ಗೆ ಅರಿವು ಹಾಗೂ ಅನ್ಯಾಯ ನಡೆದಾಗಲೆಲ್ಲ ಪ್ರತಿಭಟನೆ ಇದ್ದೇ ಇರುತ್ತದೆ ಎನ್ನುವ ಎಚ್ಚರಿಕೆ ನೀಡುತ್ತವೆ. ಇಂತಹ ಎಚ್ಚರಿಕೆಯ ಭಾಗವಾಗಿ ಇಲ್ಲಿಯ ಹಾಡುಗಳು ಸಂಗ್ರಹಗೊಂಡಿವೆ.
ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...
READ MORE