ಪುಟ್ಟ-ಪುಟ್ಟಿ

Author : ಲಿಂಗಾರೆಡ್ಡಿ ಶೇರಿ

Pages 45

₹ 18.00




Year of Publication: 2000
Published by: ಶ್ರೀ ಸಸಾ ಪ್ರಕಾಶನ
Address: # ಅಂಚೆ: ಜಾಕನಹಳ್ಳಿ, ತಾಲೂಕು ಸೇಡಂ, ಕಲಬುರಗಿ ಜಿಲ್ಲೆ.

Synopsys

ಕವಿ ಲಿಂಗಾರೆಡ್ಡಿ ಶೇರಿ ಅವರ ಕವನಗಳ ಸಂಕಲನ-ಪುಟ್ಟ-ಪುಟ್ಟಿ. ಒಟ್ಟು 24 ಕವಿತೆಗಳಿವೆ. ವಂದೇ ಮಾತರಂ, ಕುಂಬಾರಣ್ಣ, ಬೆಳಗಿನ ಹೊತ್ತು, ಹಳ್ಳಿಯ ಕೆಲಸಗಾರರು, ಮೃಗಾಲಯ ಹೀಗೆ ವಸ್ತುವೈವಿಧ್ಯತೆಯಿಂದ ಕವನಗಳು ಧ್ವನಿಸುತ್ತವೆ. ಸಾಹಿತಿ ಕೆ.ಎಸ್. ಹೆಗ್ಡೆ ಇಲ್ಲಿಯ ಕವನಗಳ ಕುರಿತು ‘ಬಾಳಿಗೆ ಗೋಳಾಗಿ, ಕೂಳಿಗೆ ತತ್ವಾರವಾಗಿ ಚಿತ್ರಿಸಿರುವ ಕವನಗಳು ಅರ್ಥಪೂರ್ಣವಾಗಿವೆ. ಬಾನಿನ ಹೂಗಳು, ಮಕ್ಕಳ ದಂಡು ಇತ್ಯಾದಿ ಕವನಗಳು ಗೇಯತೆಯಿಂದ ಕೂಡಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books