‘ಹುಲಿ ಸೀರೆ’- ಕವಿ ಕೆ.ವೈ. ನಾರಾಯಣಸ್ವಾಮಿ ಅವರ ಕವನ ಸಂಕಲನ. ಹುಲಿ ಸೀರೆ, ಹೊಕ್ಕುಳ ನದಿ, ಬದ್ ದುವಾ, ದಿಕ್ಕಿಲ್ಲದ ನೆನಪು, ಎವೆಯ ಆ ದಡದಲ್ಲಿ, ಅರಿಕೆ, ಅತ್ತಾರೆ ಭೂಮ್ತಾಯಿ, ಗಾಯ, ಗಂಧ, ಗೌರಿ, ಜಪ್ತಿಗೆ ಸಿಗದ ನವಿಲು, ನೆರಳು, ಮಣ್ಣ ಸಂಹಿತೆ, ಮಲ್ಲಿಗೆಯ ಬಳ್ಳಿಯಲ್ಲಿ ಸಂಪಿಗೆ ಹೂ, ಪ್ರಾರ್ಥನೆ, ಅಭಿಜ್ಞಾನ, ಕೃಷ್ಣನಾವೆ, ಅಚ್ಚರಿ, ಯಶೋಧರ, ಆಸೆ, ಅಗಲಿಕೆ, ಕನಸ ನಾವೆ, ಇಬ್ಬನಿ, ನನ್ನ ಮರೆತು ನೀನು ಸುಖಿ, ಅಮ್ಮ, ಮಣ್ಣ ತೇವ, ಕರಗ, ಸುಗ್ಗಿ ಹಾಡು, ವಿದಾಯ, ಯುದ್ಧ, ದೇವಸಂಗೀತ, ದೇವರು, ಒಂದು ಚಿಕ್ಕ ಚಾಕು ಸಾಕು, ಜಗದ ಕಣ್ಣ ಬೆಳಕು, ಅವಳು, ಮೊದಲ ರಾತ್ರಿ, ಸಂತ, ಫಕೀರ, ಮಾಯಾಬೇಟೆ ಹಾಡಗಳು ಮತ್ತು ಹುಲಿಸೀರೆ ಸೇರಿದಂತೆ 40 ಕವಿತೆಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಕೆ.ವೈ.ಎನ್ ಎಂದೇ ಚಿರಪರಿಚಿತರಾಗಿರುವ ಕೈ.ವೈ.ನಾರಾಯಣಸ್ವಾಮಿಯವರು ಮೂಲತಃ ಕೋಲಾರದವರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಕೆವೈಎನ್ ಅವರ ಹುಟ್ಟೂರು. ತಂದೆ-ಯಾಲಪ್ಪ ಮತ್ತು ತಾಯಿ- ಮುನಿಯಮ್ಮ. ಇವರ ಪೂರ್ಣ ಹೆಸರು ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ...
READ MORE