ಕವಿ ಅಭಿಜ್ಞಾ ಪಿ ಎಮ್ ಗೌಡ ಅವರ ಕವನ ಸಂಕಲನ ಕಾನನದ ಅರಸಿ. ಈ ಸಂಕಲನದಲ್ಲಿ ಒಟ್ಟು 47 ಕವನಗಳಿವೆ.ಈ ಕೃತಿಯಲ್ಲಿ ಪ್ರದೀಪಕುಂಆರ ಹೆಬ್ರಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಅಭಿಜ್ಞಾ ಅವರ ಚೊಚ್ಚಲ ಕವನ ಸಂಕಲನವಿದು. ಅಂತರ್ಜಾಲ ಮಾಧ್ಯಮದಲ್ಲಿ ಸಾವಿರಾರು ಕಾವ್ಯಾಭಿಮಾನಿಗಳ ಮನಗೆದ್ದಿರುವ ಇವರು, ಭರವಸೆಯ ಆಶಾಕಿರಣ. ವಸ್ತುಗಳ ಆಯ್ಕೆ, ನಿರೂಪಣೆ, ಅಭಿವ್ಯಕ್ತಿ ಕ್ರಮಗಳಿಂದ ತಮ್ಮ ಕವನಗಳಮೋಹಕತೆಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ರಾಮಣ್ಣ ಪುಟ್ಟಮ್ಮ ದಂಪತಿಗಳ ಪುತ್ರಿ ಅಭಿಜ್ಞಾ ಪಿ ಎಮ್ ಗೌಡ. ವೃತ್ತಿಯಲ್ಲಿ ಶಿಕ್ಷಕರಾಗಿ ನಾಗಮಂಗಲದಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ವಿದ್ಯಾಭ್ಯಾಸ ಬಿಎಡ್.ಎಮ್ ಎ ಸ್ನಾತಕೋತರ ಪದವಿಧರೆ.ಸ್ನಾತಕೋತರ ಪದವಿಯಲ್ಲಿ ಮೈಸೂರು ವಿದ್ಯಾನಿಲಯದಲ್ಲಿ ರಾಜ್ಯಶಾಸ್ರ್ತ ಮತ್ತು ಕನ್ನಡ ಮಾಡಿದ್ದಾರೆ.. ಮೊದಲಿನಿಂದಲೂ ಓದುವ ಹವ್ಯಾಸ ಹೊಂದಿದ್ದ ಹಾಗೂ ವಿದ್ಯಾರ್ಥಿದೆಸೆಯಲ್ಲಿ ಪ್ರಬಂಧ ಹಾಗು ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಕವನಗಳಲ್ಲಿ ಛಂದೋಬದ್ಧವಾಗಿ ಹತ್ತು ಹಲವು ಪ್ರಯೋಗಗಳಲ್ಲಿ ಬರೆದಿರುವರು. ಷಟ್ಪದಿಗಳು 200 ಕ್ಕೂ ಹೆಚ್ಚು ಬರಹಗಳು.ಚತುಶ್ರಯಲಯ ಏಳೆ ,ಸೌರಾಸ್ರ್ಟ ,ತ್ರಿವುಡೆ , ಅಕ್ಕರಿಕೆಗಳು ,ರಗಳೆಗಳು ,ವೃತ್ತಗಳಲ್ಲಿ ಸಾಕಷ್ಟು ಕವನಗಳನ್ನ ಬರೆದಿರುವೆ.ಅಲಂಕಾರಕೆ ...
READ MORE