'ವಿರಹೋತ್ಸವ' ಹೇಮಾ ಪಟ್ಟಣಶೆಟ್ಟಿ ಅವರ ಅವರ ಕವಿತೆಗಳ ಮೊದಲ ಪ್ರಕಟಿ ಸಂಗ್ರಹ. ಈ ಸಂಕಲನದಲ್ಲಿ 25 ಕವಿತೆಗಳಿವೆ. ತಿರುಗಣೆ, ಅಂಕುರ, ರತಿ, ನಾಗರತ್ನ, ದೀಪದ ಕತ್ತಲೆ, ನಿನ್ನಾಣೆ, ಧೃತಿ, ಸಂಧಿ, ಗಡಿಗಳು, ಸರೋವರ, ನಿಧಾನ, ಪಂಚಸೂತ್ರ, ಸಂಕಲ್ಪ, ಸಂಕರ, ಹತ್ತರಲಿ ಹನ್ನೊಂದಾಗಿ, ಅಯ, ಸಾಹಿತ್ಯ ಸಹಿತ ಮಹಿಳೆಯರು, ಅಂತರ, ತಾಳೆ, ಭಾವ-ಚಿತ್ರ-ಕಾವ್ಯ, ಗಂಡ-ದಂಡ, ಜಾತ್ರೆ, ಸುತ್ತು, ಗಂಡನೊಳಗಿನ ಗಂಡು ಹುಡುಗ, ವಿರಹೋತ್ಸವ ಕವಿತೆಗಳಿವೆ
ಈ ಸಂಕಲನದ ಕುರಿತು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ’ಇಲ್ಲಿನ ಯಶಸ್ವಿ ಕವಿತೆಗಳಲ್ಲಿ (ನಾಗರತ್ನ, ದೀಪದ ಕತ್ತಲೆ, ಧೃತಿ, ಪಂಚಸೂತ್ರ, ಸಂಕಲ್ಪ, ಗಂಡನೊಳಗಿನ ಗಂಡು... ಇತ್ಯಾದಿ) ಅವರು ತೋರಿ ಸುವ ಭಾಷೆ ಮತ್ತು ಛಂದದ ಪರಿಣತಿ ನೋಡಿದರೆ, ಇದು ಅವರ ಮೊದಲ ಸಂಗ್ರಹ ಎನ್ನಲಿಕ್ಕೆ ಬರುವು ದಿಲ್ಲ. ಶಬ್ದದ ಅರ್ಥ ಮತ್ತು ನಾದಗಳನ್ನು ಅವುಗಳ ಎಲ್ಲ ಸಾಧ್ಯತೆಗಳೊಂದಿಗೆ ದಕ್ಕಿಸಿಕೊಳ್ಳುವ ಪ್ರಯತ್ನ ಹೇಮಾ ಅವರ ಯಶಸ್ವಿ ಕವಿತೆಗಳಲ್ಲಿ ಕಾಣುತ್ತದೆ. ವಚನದ ಗದ್ಯಗಂಧಿತ್ವವನ್ನಾಗಲೀ, ಸ್ವಚ್ಛಂದದ ಮುಕ್ತ ನಡೆಯನ್ನಾಗಲೀ, ಸುನೀತದಂಥ ಬಿಗಿ ಶಿಲ್ಪವನ್ನಾಗಲೀ ಇವರು ರೂಢಿಸುವ ಕ್ರಮ ಸಂತೋಷ ನೀಡುವಂಥದು. ಹೆಣ್ಣನ್ನು ಕೇಂದ್ರದಲ್ಲಿಟ್ಟು, ಸ್ಥಾಯಿಯಾಗುವ ವಿರಹ ದಲ್ಲಿ ಬೆರಗು, ನೋವು, ಹಳಹಳಿಕೆ, ಕ್ಷಣದ ತೃಪ್ತಿ, ನಿರ್ವೇಗಗಳನ್ನು ಸಂಚಾರಿಗಳಾಗಿಸಿ ಕವಿತೆಗಳನ್ನು ಅರಳಿಸುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE