ಕವಿ ಟಿ.ಪಿ. ಉಮೇಶ ಅವರ ಕವನ ಸಂಕಲನ-ಫೋಟೊಕ್ಕೊಂದು ಫ್ರೇಮು. ಕೃತಿಗೆ ಬೆನ್ನುಡಿ ಬರೆದ ಲೇಖಕ ಆನಂದ ಋಗ್ವೇದಿ ‘ಈ ಸಂಕಲನವು ಒದು ಸಾಧಾರಣ ಫೋಟೊಕ್ಕೆ ಹಾಕಿದ ಸುವರ್ಣ ಚೌಕಟ್ಟಲ್ಲ. ಬದಲಿಗೆ, ಬದುಕನ್ನು ಅಸಂಖ್ಯ ಕೋನಗಳಿಂದ ನೋಡಿ ಸೆರೆ ಹಿಡಿದ ಸುಂದರ ಕೊಲಾಜ್ ಗೆ, ಹಾಕಿದ ಚೆಂದದ ಚೌಕಟ್ಟು. ಕವಿಯು ತನ್ನ ಭಾವಗಣ್ಣಿಗೆ ಕಂಡ ಎಲ್ಲಾ ನವಿರು, ಬಣ್ಣದ ಕನಸ ಕೊನರು, ಬೇಸರದ ಕಾರಿರುಳು ಮತ್ತೆ ಭರವಸೆಯ ಹೊಂಬೆಳಕಿನ ಛಾಯೆಗಳಲ್ಲಿ ಚಿತ್ರಗಳನ್ನು ಅಕ್ಷರಗಳಲ್ಲಿ ಆಕರ್ಷಕವಾಗಿ ಬಿಡಿಸಿದ್ದಾರೆ’ ಎಂದು ಕಾವ್ಯಗಳನ್ನು ಪ್ರಶಂಸಿಸಿದ್ದಾರೆ.
ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ) ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ...
READ MORE