‘ಬದುಕಿನ ಬಣ್ಣಗಳು’ ಕವಿ ವೆಂಕಟೇಶ ಚಾಗಿ ಅವರ ಕವನ ಸಂಕಲನ. 69 ಕವನಗಳಿವೆ. ಇಲ್ಲಿಯ ಕವಿತೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸಾಹಿತಿ ಶಶಿಕಾಂತ ಕಾಡ್ಲೂರ್ ಮುನ್ನುಡಿ ಹಾಗೂ ಗುಂಡೂರಾವ್ ದೇಸಾಯಿ ಬೆನ್ನುಡಿ ಬರೆದು, ಕವಿತೆಗಳ ರಚನೆಯನ್ನು ಪ್ರಶಂಸಿಸಿದ್ದಾರೆ.
ಕವಿ, ಶಿಕ್ಷಕ ವೆಂಕಟೇಶ ಚಾಗಿ ಅವರು ಮೂಲತಃ ಗದಗ ನಗರದವರು. (ಜನನ: 1985 ಜೂನ್ 6ರಂದು). ಎಂ.ಎಸ್.ಸಿ ಪದವೀಧರರು. ಪ್ರಸ್ತುತ ರಾಯಚೂರು ಜಿಲ್ಲೆಯ ಈಚನಾಳದಲ್ಲಿ ಪ್ರಥಮಿಕ ಶಾಲಾ ಶಿಕ್ಷಕರು. ‘ಮೊದಲ ಹನಿ’ , ಬದುಕಿನ ಬಣ್ಣಗಳು. ಹಕ್ಕಿಯ ಅರಮನೆ (ಕವನ ಸಂಕಲನಗಳು) ಲಿಂಗಸುಗೂರ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ, ಲಿಂಗಸುಗೂರ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷ, ರಾಯಚೂರು ಜಿಲ್ಲಾ ಕವಿವೃಕ್ಷ ಬಳಗದ ಸಂಘಟನಾ ಕಾರ್ಯದರ್ಶಿ, ಲಿಂಗಸುಗೂರ ಕಾವ್ಯ ಮಂಟಪದ ಸದಸ್ಯರು. ಬೆಂಗಳೂರು ಜಿಲ್ಲಾ ಕವಿವೃಕ್ಷ ಬಳಗದಿಂದ ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿದೊರೆತಿದೆ. ...
READ MORE