ಬಾವುಟದ ಬಟ್ಟೆ

Author : ಹುಲಿಕಟ್ಟಿ ಚನ್ನಬಸಪ್ಪ

Pages 47




Year of Publication: 2012
Published by: ಚಿಂತನ ಪುಸ್ತಕ

Synopsys

ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರ ಲೇಖನ ಕೃತಿ ʻಬಾವುಟದ ಬಟ್ಟೆʼ. ಲೇಖಕ ಪ್ರೊ. ಕಾಶೀನಾಥ ಅಂಬಲಗೆ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಬದುಕು – ಬರಹ ಏಕವಾಗಿಸಿ ಬದುಕನ್ನ ಎತ್ತರಕ್ಕೆ ಒಯ್ಯುವ, ಅತ್ಯಾವಶ್ಯಕವಾದಾಗ ಜನಮಾನಸವನ್ನು ಹೋರಾಟಕ್ಕೆ ಅಣಿಗೊಳಿಸುವ, ಸ್ವತ: ತಾನೂ ಕೂಡ ಸಂಘರ್ಷದಲ್ಲಿ ಸಾಹಿತ್ಯ; ಸಾಹಿತ್ಯದಲ್ಲಿ ಸಂಘರ್ಷಕ್ಕೆ ಪವೇಶಿಕೆ ಆಗುಮಾಡುವ ಒಂದು ಪರಂಪರೆಯೇ ಇದೆ. ವಚನಸಾಹಿತ್ಯದ ಶರಣರನ್ನು ಇಲ್ಲಿ ನೆನೆಯಬಹುದು, ಗೋದಾವರಿ ಪರುಳೆಕರ್‌ರನ್ನು ಕಣ್ಮುಂದೆ ತಂದುಕೊಳ್ಳಬಹುದು. ಈ ಪರಂಪರೆಯಲ್ಲಿ ಗೆಳೆಯ ಶಿಕ್ಷಕ ಕವಿ ಶ್ರೀ ಹುಲಿಕಟ್ಟಿ ಚನ್ನಬಸಪ್ಪ ನನಗೆ ಕಂಡು ಬರುತ್ತಾರೆ. ಸದ್ಯ ತಮ್ಮ “ಬಾವುಟದ ಬಟ್ಟೆ" ಎಂಬ ಕವನ ಸಂಕಲನ ಕನ್ನಡದ ಸಂವೇದನಾಶೀಲ ಓದುಗರ ಕೈಯಲ್ಲಿ ಇಡುತ್ತಿದ್ದಾರೆ. ಇವರು ಎಸ್‌ಎಫ್‌ಐ, ಸಮುದಾಯ, ಪ್ರಾಂತ ರೈತ ಸಂಘಗಳಿಗೆಲ್ಲ ಬೇಕಾದವರು, ಅವುಗಳ ಹೋರಾಟಗಳಿಗೆಲ್ಲ ಮುಂಚೂಣಿಯಲ್ಲಿದ್ದವರು. ಇವರ ಹೋರಾಟದ ಹಾಡುಗಳೆಲ್ಲ ಸಮುದಾಯದ ಮೆನಿಫೆಸ್ಟೋಗಳಿದ್ದಂತೆ. ಸ್ವತಃ ಗಾಯಕರೂ ಆದ ಇವರು ತಮ್ಮ ಕವಿತೆಗಳು ಜನರ ಬದುಕು ಹಸನಗೊಳಿಸಲು ಮೀಸಲು ಎಂದು ನಂಬಿದವರು. ತಮ್ಮ ಹಾಡುಗಳು ಯುವಕರನ್ನು ಆರೋಗ್ಯಕರವಾದ ಸಮಾನತೆಯ ಸಮಾಜ ಕಟ್ಟಲು ಸಿದ್ದಿಗೊಳಿಸುವ ಪರಿಕರವೆಂದು ಬಗೆದವರು. ಕಲೆಗಾಗಿ ಕಲೆ ಅಲ್ಲ-ಬದುಕಿಗಾಗಿ ಕಲೆ ಎಂದು ನಂಬಿಕೊಂಡು ಹಾಗೂ ಹಾಗೆ ಹೇಳಿಕೊಂಡೇ, ಕಾವ್ಯಕಾಯಕದಲ್ಲಿ ನಿರತರಾದವರು ಹುಲಿಕಟ್ಟಿ ಚನ್ನಬಸಪ್ಪ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಪ್ರೀತಿ ಸಾಯುವುದಿಲ್ಲ, ಹೂವು ಕೆಂಪಾದವು ಹೀಗೆ, ಕಾಣಲೇ ಇಲ್ಲ ಬಾವುಟ, ಆ ಕೈಗಳಿಗೇಕೆ?, ತಲೆಗಳು ಉರುಳ್ಯಾವೋ, ಕೂಗಲು ಬಿಡಿ, ಪ್ರೀತಿ ಎಂಬುದು ಗೆಳತಿ, ರೊಟ್ಟಿ ಕೊಡಿ, ಆಸೆ, ನನಗೊಂದು ಪೆನ್ನು ಕೊಡಿ, ಕೊಲ್ಲುವ ಧರ್ಮ ನಿಮ್ಮದಾದರೆ, ಅವ್ವ ಹಚ್ಚಿದ ದೀಪ, ಚಂದಿರನೇತಕೆ ಓಡುವನಮ್ಮ, ಭಾವುಟದ ಬಟ್ಟೆ, ನೀವೊಮ್ಮೆ ಯೋಚಿಸ ಬೇಕಿತ್ತು, ಮೂಡಿ ಬಂದನು ಸೂರ್ಯ, ಸುದ್ದಿಯಾಗಲೇ ಇಲ್ಲ, ಪ್ರೀತಿ ಹಂಚುವ ಹೊತ್ತು, ಪ್ರೀತಿಯ ನಗೆ ಚೆಲ್ಲಿ, ಪ್ರೀತಿಯ ಮತ್ತು ಹಾವು, ಗೋಲಿಗಳು, ಅವ್ವ, ಬುರ್ಖಾದೊಳಗಿನ ಕಣ್ಣುಗಳು, ಸಮತೆಯ ಹಾಡು, ಅನ್ನದ ಕೂಗು, ಅಜ್ಜ ಹುಡುಕುತ್ತಿದ್ದಾನೆ, ಎಣಿಸುತ್ತಿದ್ದೇನೆ ನಾನು, ರಾತ್ರಿ ಕಂಡ ಕನಸು, ಶರಣರ ಮೇಳದ ನಡುವೆ ಹಾಗೂ ಕೂಗುತ್ತೇವೆ ನಾವು ಸೇರಿ 30 ಶೀರ್ಷಿಕೆಗಳಲ್ಲಿ ಕವನಗಳಿವೆ.

About the Author

ಹುಲಿಕಟ್ಟಿ ಚನ್ನಬಸಪ್ಪ

ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. ತಂದೆ- ಲಕ್ಷ್ಮಣ, ತಾಯಿ- ಲಕ್ಷ್ಮಮ್ಮ. ಮೊಳಕಾಲ್ಮೂರು ತಾಲೂಕಿನ ಅಮುಕುಂದಿ ಹಾಗೂ ಭೈರಾಪುರದಲ್ಲಿಪ್ರಾಥಮಿಕ ಶಿಕ್ಷಣ, ಹೂವಿನಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ  ಮತ್ತು ಪಿ.ಯು.ಸಿ, ಪದವಿ, ಶಿಕ್ಷಕರ ತರಬೇತಿಯನ್ನು ಹರಪನಹಳ್ಳಿಯಲ್ಲಿ ಪೂರೈಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಭಾರತ ವಿದ್ಯಾರ್ಥಿ ಸಂಘಟನೆ(ಎಸ್.ಎಫ್.ಐ), ರೈತಸಂಘಟನೆ, ಸಮುದಾಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. 1986ರಲ್ಲಿ ಅಣು ಸಮರದ ವಿರುದ್ಧ ಜನಜಾಗೃತಿಗಾಗಿ ರಾಜ್ಯದಾದ್ಯಂತ ನಡೆದ ಚಳವಳಿಯಲ್ಲಿ ಜನಪ್ರಿಯವಾಗಿದ್ದ ಹಾಡು ‘ತಲೆಗಳು ಉರುಳ್ಯಾವೊ’ ಇವರೇ ರಚಿಸಿದ್ದು.  1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಗೌರವ ಶಿಕ್ಷಕರ ಸಂಘಟನೆ, ...

READ MORE

Related Books