ಅಬ್ಬಾಸ್ ಕಿರೊಸ್ತಾಮಿ ಅವರ ‘ಹೆಸರಿಲ್ಲದ ಹೂ’ ಕೃತಿಯನ್ನು ಹೇಮಾ. ಎಸ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿನ ಮಾತುಗಳು ಹೀಗಿವೆ; ಅಬ್ಬಾಸ್ ಕಿರೊಸ್ತಾಮಿ ದೃಶ್ಯಕಾವ್ಯದ ಅನನ್ಯ ಕಲೆಗಾರ. ವಿಶ್ವಸಿನೆಮಾ ರಂಗದಲ್ಲಿ ಈತನ ಹೆಸರು ಚಿರಪರಿಚಿತ. ಕಾವ್ಯಕ್ಕೂ ಈತನ ಚಿತ್ರಗಳಿಗೂ ನಡುವೆ ಗಾಢವಾದ ಸಂಬಂಧವಿದೆ. ಪರ್ಷಿಯನ್ ಭಾಷೆಯ ಈ ಕವಿ ಇರಾನಿನವನು. ಜಗತ್ತಿನ ಪ್ರಾಚಿನ ಸಾಹಿತ್ಯಗಳಲ್ಲಿ ಪರ್ಷಿಯನ್ ಸಾಹಿತ್ಯವೂ ಒಂದು. ಪರ್ಷಿಯನ್ ಸಾಹಿತ್ಯದ ಸೂಫಿ ಕಾವ್ಯಪರಂಪರೆ ಹಾಗೂ ಗಝಲ್‌ಗಳು ಜಗತ್ತಿಗೆ ಹೆಚ್ಚು ಪರಿಚಿತವಾದದ್ದು. ಉಮರ್ ಖಯ್ಯಾಂ, ರೂಮಿ ಇವರಿಬ್ಬರೂ ಅತಿ ಹೆಚ್ಚು ಜಗತ್ತಿನ ಭಾಷೆಗಳಿಗೆ ಅನುವಾದಗೊಂಡಿರುವ ಕವಿಗಳು. ಕನ್ನಡದಲ್ಲೂ ಇವರ ಕಾವ್ಯದ ಅನುವಾದದ ಪ್ರಯತ್ನಗಳು ನಡೆದಿರುವುದನ್ನು ಕಾಣಬಹದು.
ಹೇಮಾ ಎಸ್, ಕನ್ನಡದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ಉಪನ್ಯಾಸಕಿಯಾಗಿ ಹಾಗೂ ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿಯಿಂದ ಲೇಖನ, ಕಥೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವು ಮಯೂರ, ಪ್ರಜಾವಾಣಿ, ಅವಧಿ, ಕಸ್ತೂರಿ, ಕೆಂಡಸಂಪಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಂಡಸಂಪಿಗೆಯಲ್ಲಿ ಅಕಿರ ಕುರಸೊವನ ಆತ್ಮಕತೆಯ ಅನುವಾದದ ಸರಣಿ ಪ್ರಕಟವಾಗುತ್ತಿದೆ. ಅಬ್ಬಾಸ್ ಕಿರಸ್ತೋಮಿಯ ಪದ್ಯಗಳ ಅನುವಾದ ʼಹೆಸರಿಲ್ಲದ ಹೂʼ ಸಂಚಯದಿಂದ ಪ್ರಕಟಗೊಂಡಿದೆ. ಜೊತೆಗೆ ಅನುವಾದಿತ ಕೃತಿ ‘ಉರಿವ ಬನದ ಕೋಗಿಲೆಗಳು’ಕೃತಿ ಸೃಷ್ಟಿ ಪ್ರಕಾಶನದಿಂದ ಪ್ರಕಟವಾಗಿದೆ. ...
READ MORE