‘ಭಕ್ತಿ ಹೂ ಗೊಂಚಲು’ ಬಿ. ವಿ. ರಾವ್ ಅವರ ಕವನ ಸಂಕಲನವಾಗಿದೆ. 2006ರಲ್ಲಿ ನನಗೆ 60 ವರ್ಷವಾದಾಗ "ಹೂಗೊಂಚಲು" ಎಂಬ ಕವನ ಸಂಗ್ರಹವು ಪ್ರಕಟವಾಯಿತು. ಈಗ ಅದೇ "ಹೂಗೊಂಚಲು" ಪುಸ್ತಕವನ್ನು ಹೊಸ ಕವನಗಳನ್ನು ಸೇರಿಸಿ “ಪ್ರೇಮ ಹೂಗೊಂಚಲು" ಮತ್ತು "ಭಕ್ತಿ ಹೂಗೊಂಚಲು" ಎಂದು ಎರಡು ಭಾಗವಾಗಿ ಮತ್ತೊಮ್ಮೆ ಪ್ರಕಟವಾಗುತ್ತಿದೆ. ಭಕ್ತಿ ಹೂಗೊಂಚಲಿನಲ್ಲಿ ಭಕ್ತಿ ಗೀತೆಗಳು ಅನುವಾದಿತ ಕವನಗಳು ಮತ್ತು ಸಂಸ್ಕೃತ ರಚನೆಗಳು ಎಂದು ಭಾಗ ಮಾಡಲಾಗಿದೆ. ಈಗಾಗಲೇ ಇದೇ ಶೀರ್ಷಿಕೆಗಳ "ಭಕ್ತಿ ಹೂಗೊಂಚಲು ಭಾಗ-1" ಮತ್ತು "ಪ್ರೇಮಹೂಗೊಂಚಲು ಭಾಗ-1" ಎಂಬ ಎರಡು ಧ್ವನಿಸುರುಳಿಗಳು 2010 ರಲ್ಲಿ ಪ್ರಕಟಮಾಡಲಾಗಿದೆ.
ಶ್ರೀ ಬಿ.ವಿ.ರಾವ್ (ಬಪ್ಪನಾಡು ವಿಜಯ್ ಕುಮಾರ್) ಅವರು ದಿನಾಂಕ: 25\ 09\1946 ರಂದು ಮಂಗಳೂರು ಜಿಲ್ಲೆಯ ಕಿನ್ನಿಗೋಳಿನಲ್ಲಿ ಜನಿಸಿದರು. ಕಿನ್ನಿಗೋಳಿಯ ಪಾಂಪೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿತ ಮೇಲೆ ಬಿ.ವಿ.ರಾಯರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಮಾಡಿ ಉನ್ನತ ಅಂಕಗಳನ್ನು ಗಳಿಸಿ ಸುರತ್ಕಲ್ಲಿನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ( ಆಗ KREC ಮತ್ತು ಈಗ NITK) 1968ರಲ್ಲಿ ಬಿ.ಇ. ಮೆಕ್ಯಾನಿಕಲ್ ಮಾಡಿದರು. ಶ್ರೇಷ್ಠ ಇಂಜಿನಿಯರಾಗಿದ್ದು ಕವಿಗಳಾಗಿರುವುದು ಇವರ ವಿಶೇಷ ಸಾಧನೆ. ಇವರು ನಚಿಕೇತ ಮನೋವಿಕಾಸ ಕೇಂದ್ರ, ವಿಜಯನಗರ, ಬೆಂಗಳೂರು, ಇದರ ಸಂಸ್ಥಾಪಕರು ಹಾಗೂ ಪ್ರಸ್ತು ...
READ MORE