ಮಿಲೇನಿಯಂ ಕವಿತೆಗಳು

Author : ದೊಡ್ಡರಂಗೇಗೌಡ

Pages 352

₹ 180.00




Year of Publication: 2012
Published by: ಅರ್ಕಾವತಿ ಪ್ರಕಾಶನ
Address: 23 ಕುವೆಂಪುನಗರ, ಮೈಸೂರು

Synopsys

‘ಮಿಲೇನಿಯಂ ಕವಿತೆಗಳು’ ದೊಡ್ಡರಂಗೇಗೌಡ ಅವರ 266 ಕವನಗಳನ್ನೊಳಗೊಂಡ ಕಾವ್ಯಕೃತಿಯಾಗಿದೆ. ಸಾಹಿತ್ಯ, ಸಂಗೀತ, ಸಿನಿಮಾ - ಈ ಮೂರುಕ್ಷೇತ್ರಗಳ ಸಂಗಮ ಇಲ್ಲಿದ್ದು, ವಿಭಿನ್ನ ಬಗೆಯ ಕವಿತೆಗಳಿವೆ. ಭಾವನೆಗಳನ್ನು , ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ, ಲಯಬದ್ಧವಾಗಿ, ಮೌನವಾಗಿ ಮನದಲ್ಲೇ ಹಾಡಿಕೊಳ್ಳಬಹುದಾದ ಜನಪದ ಶೈಲಿಯ ಸೊಗಡನ್ನು ಹೊಂದಿರುವ ಕವನಗಳಿವೆ. ಸಮಾಜದ ವಿಮರ್ಶೆ ಮಾಡುವ, ರಾಜಕೀಯ ಭ್ರಷ್ಟಾಚಾರವನ್ನು ಬಯಲು ಮಾಡುವ, ರೈತರ ಬಂಡಾಯ- ಬವಣೆಗಳನ್ನು, ಚಿತ್ರಿಸುವ ಹಲವು ಕವನಗಳು ಈ ಸಂಕಲನದಲ್ಲಿವೆ. ಸಮಾಜದ ವಿಮರ್ಶೆ ಮಾಡುವ, ರಾಜಕೀಯ ಭ್ರಷ್ಟಾಚಾರವನ್ನು ಬಯಲು ಮಾಡುವ, ರೈತರ ಬಂಡಾಯ- ಬವಣೆಗಳನ್ನು, ಚಿತ್ರಿಸುವ ಹಲವು ಕವನಗಳು ಈ ಸಂಕಲನದಲ್ಲಿವೆ. ವಿಶ್ವವ್ಯಾಪಿ ಕನ್ನಡ, ಒಂದೇ ಕರ್ನಾಟಕ, ಕನ್ನಡದ ಜಯಭೇರಿ, ನಾಡು- ನುಡಿ- ನಮನ, ಎದ್ದೇಳಿ ಕನ್ನಡಿಗರೇ ಇನ್ನಾದರೂ – ಹೀಗೆ ಕನ್ನಡನಾಡು- ನುಡಿಯನ್ನು ಕುರಿತು ಬರೆದ ಹಲವು ಉತ್ತಮ ಕವನಗಳು ನಮ್ಮ ಮನಸ್ಸನ್ನು ಹಿಡಿದಿಡುತ್ತವೆ.

ಈ ಕೃತಿಯ ವಿಶೇಷತೆಯೆಂದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವು ಸಾಧಕರ ವ್ಯಕ್ತಿ ಚಿತ್ರಣಗಳನ್ನು ಒಳಗೊಂಡಿರುವುದು, ಅಷ್ಟೇ ಅಲ್ಲದೆ ತಮ್ಮ ವಿದೇಶಿ ಪ್ರವಾಸದ ಅನುಭವಗಳನ್ನು ಕಾವ್ಯವಾಗಿಸಿರುವುದು.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books