‘ಬ್ರೆಡ್ ಜಾಮ್’ ಲೇಖಕಿ ಧರಣಿದೇವಿ ಮಾಲಗತ್ತಿ ಅವರ ಕವನ ಸಂಕಲನ. ಇಲ್ಲಿ ಬ್ರೆಡ್ ಜಾಮ್, ನಮಸ್ಕಾರ, ಕ್ಲಿಪ್ ಮತ್ತು ಹಲ್ಲು, ಅಳತೆಗೋಲು, ಕಿಟಕಿ ದೃಶ್ಯ, ಚಪ್ಪಲಿಗಳ ಕೋರಸ್ ಗೀತೆ, ನಾಲ್ಕು ಮೂಲೆಗಳು, ಹುಡುಕಾಟ, ನಾವು ರಾಣಿಯರು, ಒಂದು ಭ್ರೂಣದ ದಿನಚರಿ, ಕತ್ತಲಲ್ಲಿ ಹಾಡಿದ ಹಾಡು, ಮೊದಲ ಮಳೆ, ಸ್ವಾತಿಯ ಮೋಡ, ಒಂದು ಕಪ್ಪು ಹುಣ್ಣಿಮೆ, ಒಪ್ಪಂದ, ಅಪ್ಪ, ಕರಿಮಣಿ ನುಂಗುವ ಕೊರಳು, ಕುಂಭದೊಳಗಿನ ಪಾದ, ಮಡದಿಯರಿಗೆ ಮೋಟಿವೇಶನ್ ಥಿಯೆರಿ, ಐ ಲವ್ ಮ್ಯಾಗಿ, ಅಣಬೆ ಕವನಗಳು, ಕಲ್ಲಿದ್ದಲು ಮತ್ತು ವಜ್ರ, ಕಂಪನಿಯ ಕೂಗು, ಸಂಜೆ ನೆರಳು, ಭೂಮಿ, ಅಸ್ಪೃಶ್ಯಳ ಸ್ಪರ್ಶ, ದೀರ್ಘ ತಮಸ್ಸು, ದುಷ್ಯಂತೋಪಾಖ್ಯಾನ, ಕೆಲವು ಹನಿಗಳು, ಸೃಷ್ಟಿ, ಫಸ್ಟ್ ಕ್ರೈ, ಕಳ್ಳಿ, ಬೆಕ್ಕು, ಗುರು+ಶೂಮೇಕರ್ ಲೆವಿ=?, 32-26-32, ಪೂರ್ಣ ಎಂಬ 36 ಕವಿತೆಗಳು ಸಂಕಲನಗೊಂಡಿವೆ. ಅದರ ಜೊತೆಗೆ ಅಭಿಪ್ರಾಯಗಳು ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ಕಾವ್ಯ ಉತ್ತರಿಸಬೇಕಾದ ಸವಾಲು, ವಿಶಿಷ್ಟ ಸಂವೇದನೆ, ಹೆಮ್ಮರವಾಗಿ ಬೆಳೆಯಬಹುದಾದ ಸಸಿ ಎಂಬ ಅಭಿಪ್ರಾಯಗಳು ಸಂಕಲನಗೊಂಡಿವೆ.
ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ. 1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...
READ MORE