ಕವಿ-ಚಿಂತಕ ಎಸ್. ಬಿ. ಶಾಪೇಟಿ ಅವರು ಬರೆದ ಕವನಗಳ ಸಂಕಲನ-ಸಂಜೆ ಕಿರಣ. ಈ ಕೃತಿಗೆ ಮುನ್ನುಡಿ ಬರೆದ ಕವಿ ಗುರುಲಿಂಗ ಕಾಪಸೆ ಅವರು ‘80 ರ ಪ್ರಾಯದಲ್ಲಿ ಎಸ್.ಬಿ. ಶಾಪೇಟಿ ಅವರು ತಮ್ಮ ಆತ್ಮಕಥನ-‘ಮೌನ ಮಾತಾಡಿತು’ ಬರೆದಿದ್ದು ನಿರೂಪಣೆ, ಶೈಲಿ, ಘಟನಾವಳಿಗಳನ್ನು ಸ್ಮರಿಸಿಕೊಂಡ ಅದ್ಭುತ ಬಗೆ ಇತ್ಯಾದಿ ಬೆರಗುಗೊಳಿಸಿದ್ದವು. ಮತ್ತೇ ಈಗ ಅವರು ಕವನಗಳನ್ನು ಬರೆದಿದ್ದು ಮತ್ತಷ್ಟು ಬೆರಗುಗೊಳಿಸಿದ್ದಾರೆ. ಪ್ರಕೃತಿಪ್ರೇಮಿಗಳೂ ಆಗಿರುವುದರಿಂದ ಇಲ್ಲಿ ಅವರು ನಿಸರ್ಗದಲ್ಲಿ ಕಂಡ ಸೌದರ್ಯದ ಸೊಗಸನ್ನು ಚಿತ್ರಿಸಿದ್ದಾರೆ. ಮಾತ್ರವಲ್ಲ; ಇದರ ಮೂಲಕ ಜೀವನದ ಅರ್ಥವನ್ನು ಶೋಧಿಸಿದ್ದಾರೆ. ಓದಲು ಆಕರ್ಷಿಸುವ, ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುವ, ಜೀವನದ ಅರ್ಥವನ್ನು ಹುಡುಕಲು ತೊಡಗಿಸುವ ಹಾಗೂ ಅಂತರ್ಮುಖಿಗೊಳಿಸುವ ಈ ಕವನ ಸಂಕಲನ-ಸಂಜೆ ಕಿರಣ’-ಕ್ಕೆ ಅದರದೇ ಆದ ಬೆಳಕಿದೆ’ ಎಂದು ಪ್ರಶಂಸಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಸಿದ್ದಪ್ಪ ಶಾಪೇಟಿ (ಎಸ್.ಬಿ.ಶಾಪೇಟಿ) ಅವರು ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಉಚ್ಛ ಶಿಕ್ಷಣ ಪಡೆದು ಅಲ್ಲಿಯೇ ಅಧ್ಯಾಪಕರಾದರು. ಇವರ ಕರ್ತವ್ಯ ದಕ್ಷತೆಯನ್ನು ಕಂಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ, ಇವರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಮಂತ್ರಿಸಿದಾಗ ಶಾಪೇಟಿ ಅವರು ಧಾರವಾಡಕ್ಕೆ ಬಂದು ನೆಲೆಸಬೇಕಾಯಿತು. ನಂತರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಯಾಗಿ ನೇಮಕ ಗೊಂಡು, ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಕಾರಣರಾದರು.ಅವರ ಕರ್ತವ್ಯನಿಷ್ಠೆ ಹಾಗೂ ಶಿಸ್ತು ಬದ್ಧ ಜೀವನವನ್ನುತಮ್ಮದೇ ಆದ ಆತ್ಮಕಥೆ-‘ಮೌನ ಮಾತನಾಡಿತು’ ಕೃತಿಯಲ್ಲಿ ಉಲ್ಲೇಖಿಸಿದ್ದು, ಇತರರಿಗೂ ಮಾದರಿಯಾಗಿದೆ. ಬಾಲ್ಯದ ನೆನಪುಗಳು, ಕೊಲ್ಹಾಪುರ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ಹಾಗೂ ಸ್ನೇಹಸುಧೆ ಹೀಗೆ ...
READ MORE