‘ಲೋಹದ ಕಣ್ಣು’ ಎಚ್.ಎಲ್. ಪುಷ್ಪ ಅವರ ಕವನ ಸಂಕಲನ. ಸಿದ್ಧವಸ್ತು, ಶೈಲಿಗಳ ಒತ್ತಡದಲ್ಲಿ ಮಹಿಳಾಕಾವ್ಯ ತನ್ನ ಶಕ್ತಿ ಹಾಗೂ ಹೊಸತನವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ತಮ್ಮ ಹೊಸ ಕವಿತಾ ಸಂಗ್ರಹ 'ಲೋಹದ ಕಣ್ಣು' ಮೂಲಕ ಎಚ್.ಎಲ್. ಪುಷ್ಪ ಅವರು ಅದಕ್ಕೆ ಮಹತ್ವದ ತಿರುವು ಕೊಡುತ್ತಿರುವುದು ಸಂತೋಷದ ಸಂಗತಿ ಎನ್ನುತ್ತಾರೆ ಲೇಖಕ ಜಿ.ಎಸ್. ಆಮೂರ. ಇದು ಎಚ್.ಎಲ್. ಪುಷ್ಪ ಅವರ ಮೂರನೆಯ ಕವನ ಸಂಕಲನ. ಈ ಕೃತಿಯಲ್ಲಿ ಏಕಲವ್ಯನೆಂಬ ಗುರುವಿಗೆ, ಗುರುವು ತೋರಿದ ಕವಿತೆ, ದಾರಿ ಕಳಕೊಂಡಿದೆ ಕವಿತೆ, ಕುಂಡಲಕೇಶಿ, ಬುದ್ಧನ ನದಿಯ ಹಾಡು ಸೇರಿದಂತೆ ಹಲವು ಮಹತ್ವದ ಕವಿತೆಗಳಿವೆ.
ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...
READ MORE