ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದಿರುವ ’ಧರೆಗೆ ಬೆಳಗಿದ ದೇವತೆ’ ಕವನ ಸಂಕಲನದಲ್ಲಿ 70 ಕವನಗಳಿವೆ. ಧರಣಿ ಬೆಳಗಿದ ದೇವತೆ, ನಾನೇನು ಕೇಡು ಮಾಡಿದ್ದೆ?, ನೀನೆ ಅಲ್ಲವೆ ಮಹಿಳೆ, ರಸಋಷಿಗೆ ಮನವಿ, ಅನ್ನದಾತ ಮತ್ತು ಸೈನಿಕ ಹೀಗೆ ವಿವಿಧ ಕವನಗಳಿದ್ದು, ವಿಷಯ ವೈವಿಧ್ಯತೆಯೂ ಇದೆ.
ಈಗಾಗಲೇ ಬಾಲ್ಯಾವಸ್ಥೆ ಮತ್ತು ಬೆಳವಣಿಗೆ ಹಾಗೂ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ ಎರಡು ಪುಸ್ತಕಗಳ ಜೊತೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳ ಗೊಂಚಲು ಎಂಬ ಚುಟುಕು ಸಂಕಲನವನ್ನು ಬರೆದಿದ್ದು, ಪ್ರಸ್ತುತ ರಾಯಚೂರು ಜಿಲ್ಲೆಯ ಮಾನವಿಯ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ...
READ MORE