ಹಿಮದಡಿಯ ಕುದಿಮೌನ

Author : ಸಿದ್ಧಲಿಂಗಪ್ಪ ಬೀಳಗಿ

Pages 40

₹ 40.00




Year of Publication: 2020
Published by: ಅಶ್ವಿನಿ ಪ್ರಕಾಶನ
Address: ಮಹಾಂತ ನಗರ, ಹುನಗುಂದ-587118, ಜಿಲ್ಲೆ ಬಾಗಲಕೋಟ
Phone: 9448541356

Synopsys

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರ ಕೃತಿ-ಹಿಮದಡಿಯ ಮೌನ. ಇದು 184 ಹಾಯ್ಕುಗಳ ಸಂಕಲನ. ಜಪಾನಿ ಕಾವ್ಯ ಎಂದೇ ಪ್ರಸಿದ್ಧಿ ಪಡೆದ, ಕಿರಿದಾದ ಶಬ್ದ ವ್ಯಾಪ್ತಿ ಹೊಂದಿದ್ದರೂ ಹಿರಿದಾದ ಅರ್ಥವ್ಯಾಪ್ತಿಯನ್ನು ನೀಡುವ ಹಾಯ್ಕುಗಳ ಬರಹಗಳು ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಸಾಮಾಜಿಕ ವಿದ್ಯಮಾನಗಳು, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ವಿಷಯ ವಸ್ತುಗಳನ್ನು ಒಳಗೊಂಡಿದೆ. 

ಅಲ್ಪದರಲ್ಲಿಯೇ ಅಗಾಧವಾದ ಅನುಭೂತಿ ನೀಡುವ, ಹೇಳಿದ್ದಕ್ಕಿಂತ ಹೇಳದಿರುವುದೇ ವಿಶೇಷವಾಗಿರುವ `ಹಾಯ್ಕು’ ಎಂಬ ಕಾವ್ಯ ಪ್ರಕಾರ ತನ್ನದೇಯಾದ ರೂಪುರೇಷೆ ಹೊಂದಿದ್ದು ವಿಸ್ತೃತ ಅರ್ಥಸಾಧ್ಯತೆಗೆ ಅವಕಾಶ ನೀಡುತ್ತದೆ. 

ಈ ಸಂಕಲನದ ಕವಿಗಳ ಜೀವನಾನುಭವ, ಅಧ್ಯಯನ, ಸಮಾಜಮುಖಿ ಚಿಂತನೆಯ ಪ್ರತಿಫಲನದಂತಿರುವ ಈ ಹಾಯ್ಕುಗಳು ವಾಸ್ತವ ಸಂಗತಿಗಳ ಜೊತೆಗೆ ಕಾಣದ ಮುಖದ ದರ್ಶನವಾಗಿರುತ್ತದೆ, ಅವೆಲ್ಲವೂ ಹಾಯ್ಕುಗಳ ಮೂಲಕ ಹೊರಹೊಮ್ಮಿವೆ.  ಬಹುತೇಕ ಹಾಯ್ಕುಗಳಲ್ಲಿ ಜೀವನಪ್ರೀತಿಯ ದಟ್ಟ ಛಾಯೆಯಿದೆ. ಸದೃಢ ಸಮಾಜದ ಕನಸುಗಳಿವೆ. ಧನಾತ್ಮಕ ಆಲೋಚನೆಗಳ ಹಿತವಾದ ಮಾರ್ಗದರ್ಶನವಿದೆ. ಸಮಾಜದಲ್ಲಿನ ವೈರುಧ್ಯಗಳ ಕುರಿತು ತಣ್ಣನೆಯ ಪ್ರತಿಭಟನೆಯಿದೆ, ಪ್ರೀತಿ ಸುಮವಾಗಿ ಅರಳಿದೆ ತಾತ್ವಿಕ ಚಿಂತನೆ ಕೆನೆಗಟ್ಟಿದೆ, ಮಾನವ ವಿಕೃತಿ ಕೇಕೆಹಾಕುವ ತಲ್ಲಣವಿದೆ. ಸಂಕಲನ ಹೆಸರೇ ಸೂಚಿಸುವಂತೆ ಇಲ್ಲಿ ಕವಿಯ ಭಾವ ಹಿಮದಂತೆ ತಣ್ಣಗಿದೆ, ಜ್ವಾಲಾಮುಖಿಯಂತೆ ಕುದಿತವೂ ಇದೆ.

About the Author

ಸಿದ್ಧಲಿಂಗಪ್ಪ ಬೀಳಗಿ

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದವರು. ಹುನಗುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರು. ಎಂ.ಎ. ಎಂ. ಈಡಿ ಪದವೀಧರರು.  ಛಾಯಾಗ್ರಹಣ ಇವರ ಹವ್ಯಾಸ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಲೇಖನಗಳು ಪ್ರಕಟವಾಗಿವೆ. ಧಾರವಾಡ ಆಕಾಶವಾಣಿಯಿಂದ ಚಿಂತನಗಳು, ಭಾಷಣಗಳು, ಕಥೆ, ಸಂವಾದ, ಕವಿತೆಗಳು ಪ್ರಸಾರಗೊಂಡಿವೆ. ದೂರದರ್ಶನ ಚಂದನವಾಹಿನಿಯ 'ಬೆಳಗು' ನೇರಪ್ರಸಾರ ಮತ್ತು 'ವಚನಾಮೃತ' ಕಾರ್ಯಕ್ರಮ ಪ್ರಸಾರಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ ಮತ್ತು ಅಖಿಲ ...

READ MORE

Related Books