ಕೀರ್ತಿ ಕಿರಣ್ ಕುಮಾರ್ ಅವರ ಕವನ ಸಂಕಲನ ಬೆಳ್ಳಕ್ಕಿ ಹಾಡಿತು. ಈ ಕವನ ಸಂಕಲನದಲ್ಲಿ 90 ಕವಿತೆ ಗಳಿದ್ದು, ಪ್ರತಿ ಕವಿತೆಗಳು ವಿಶಿಷ್ಟ ಮತ್ತು ವಿಭಿನ್ನ ವಾಗಿ ಮೂಡಿಬಂದಿವೆ. ಸಾಮಾಜಿಕ ಕಳಕಳಿಯುಳ್ಳ ಕವಿತೆಗಳು, ಸ್ತ್ರೀ ಶೋಷಣೆ ಯ ಸಂಭಂದಿತ ಕವಿತೆಗಳು, ಮಕ್ಕಳ ಕವಿತೆಗಳು,ಪ್ರೀತಿ, ಪ್ರೇಮ, ಪ್ರಣಯದ ಕವಿತೆಗಳು ಸಹ ಬೆಳ್ಳಕ್ಕಿ ಹಾಡಿತು. ಪುಸ್ತಕದಲ್ಲಿವೆ. ಒಟ್ಟಾರೆ ವಿಷಯ ನಿರೂಪಣೆ ಸರಳವಾಗಿದ್ದು, ಸಾಮಾನ್ಯ ಜನರು ಅರ್ಥೈಸಿಕೊಳ್ಳ ಬಹುದಾದ ಕವಿತೆಗಳು ಬಹಳಷ್ಟು ಇವೆ. ಮಲೆನಾಡಿನ ಸೊಬಗಿನ ಬಗ್ಗೆಯೂ ಕವಿತೆಗಳಿವೆ.
ಕೀರ್ತಿ ಕಿರಣ್ ಕುಮಾರ್ ಸಕಲೇಶಪುರದವರು. ಇವರು 1984 ಫೆಬ್ರವರಿ 13 ರ ರಲ್ಲಿ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲ್ಲೂಕಿನ, ಹಾರಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ಎನ್. ಧರ್ಮಪ್ಪ ಮತ್ತು ತಾಯಿ ಸುಶೀಲ. ಬಿ. ಎಸ್ಸಿ. ಬಿ. ಎಡ್. ತರಬೇತಿ ಯನ್ನು ಜೆ. ಎಸ್ . ಎಸ್. ಶಿಕ್ಷಣ ಸಂಸ್ಥೆ ಯಲ್ಲಿ ಪಡೆದು ಕೆಲವು ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ನಾಡಿನ ಪತ್ರಿಕೆ ಗಳಿಗೆ, ಕಾಯಂ ಲೇಖಕಿಯಾಗಿ, ಸಂದರ್ಶಕಿಯಾಗಿ, ವರದಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಲಲಿತ ಪ್ರಭಂದ, ಕವಿತೆ, ಸಣ್ಣ ಕಥೆ, ...
READ MORE