ಮನುಷ್ಯತ್ವದ ಸ್ಮೃತಿಗಳನ್ನು ಧೇನಿಸುವ ಕವನಸಂಕಲನ ಪ್ರತಿಭಾ ನಂದಕುಮಾರ್ ಅವರ ‘ಅವನ ಮುಖ ಮರೆತು ಹೋಗಿದೆ’. ಗುರುತು ಮರೆತು ಹೋಗುವುದು ಎನ್ನುವ ಒಳಾರ್ಥವನ್ನು ಹೊಂದಿರುವ ಈ ಕೃತಿಯು ಮರೆವಿನ ಮರೆಗುಳಿ ಸಮುದಾಯ, ವ್ಯಕ್ತಿಗಳ ಜೀವನ ಚಿತ್ರಣ, ದುರಿತ ಕಾಲದ ಕೌರ್ಯ, ಮಾತಿನ ಸಂವಹನ, ಅಸ್ವಿತ್ವದ ಕುರುಹುಗಳನ್ನು ಧ್ಯಾನಿಸುತ್ತಾ ಈ ನೆಲೆಯಲ್ಲಿಯೇ ಕವಿತೆಗಳನ್ನು ಪ್ರಸ್ತುತಪಡಿಸುತ್ತದೆ. ಲೇಖಕಿಯ ಮೊದಲ ಕವಿತೆಗಳು ‘ನಾವು ಹುಡುಗಿಯರೇ ಹೀಗೆ’ ಎನ್ನುವ ಸಾರ್ವತ್ರಿಕ ಸ್ತ್ರೀವಾದದಿಂದ ಹುಟ್ಟಿದಂಥವು. ಇಲ್ಲಿನ ಕವಿತೆಗಳೆಲ್ಲವೂ ಎಲೆ, ಮೊಲೆ, ಒಲೆ, ಕಾಮ, ಯೋನಿ, ಕಾಳಗ, ದೇಹ, ಮನಸ್ಸು ಇಂತಹ ಪದಾರ್ಥಗಳ ರೂಪವಾಗಿ ಎದುರುಗೊಳ್ಳುತ್ತವೆ. ಸ್ಥೂಲವಾಗಿ ಎರಡು ವಿಸ್ಮೃತಿಗಳನ್ನು ಹೊಂದಿರುವ ಈ ಕವನ ಸಂಕಲನ ಮನುಷ್ಯನ ಮನುಷ್ಯತ್ವದ ಚಹರೆ ಕಳೆದುಹೋಗಿ ಅವನೊಳಗಿರುವ ವಿಕೃತಿಗಳು ಉಕ್ಕುತ್ತಿರುವಾಗ, ಅವನೊಳಗೆ ಹಿಂದೆ ಇದ್ದಿರಬಹುದಾದ ಮನುಷ್ಯತ್ವದ ಸ್ಮೃತಿಯ ಬಗೆಗೆ ಗಮನ ಹರಿಸುತ್ತದೆ.
ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ...
READ MORE