ವಿನಯ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 120

₹ 30.00




Year of Publication: 1972
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ ಆಯ್ದ 52 ಕವಿತೆಗಳನ್ನು ಒಳಗೊಂಡಿರುವ ಸಂಕಲನ ವಿನಯ. ಇದನ್ನು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ರೂಪದಲ್ಲಿ ಸಿದ್ದಪಡಿಸಿದೆ. ವರ್ಷಕ್ಕೆ 52 ವಾರಗಳಿರುವ ಹಾಗೆ ಕವನಗಳ ಸಂಖ್ಯೆಯನ್ನು 52 ಕ್ಕೆ ಕವಿ ಸೀಮಿತಗೊಳಿಸಿದ್ದಾರೆ.

ಮುನ್ನುಡಿಯಲ್ಲಿ ನಯ, ವಿನಯದ ಪದಗಳ ಬಗ್ಗೆ ವಿವರಿಸಿರುವ ಬೇಂದ್ರೆಯವರು ಸುಳ್ಳು ವಿನಯ ಆತ್ಮ ವಂಚನೆಯೇ ಸರಿ ಎಂದು ತಿರ್ಮಾನಿಸಿದ್ದಾರೆ. ವೈದಿಕ ಋಷಿಗಳಲ್ಲಿಯೂ ಪ್ರಾಚೀನ ಮತ್ತು ನವೀನ ಕವಿಗಳು ಎಂಬ ವಿಭಾಗ ಇದ್ದೆ ಇತ್ತು. ಹಾಗೆಯೇ ಇಂದಿಗೂ ಇದೆ. ನಾನು ಮಾರ್ಗ ವಿರೋಧಿ ಅಲ್ಲ; ನವ್ಯ ಕಾವ್ಯವನ್ನು ದೂರುವವನೂ ಅಲ್ಲ: ಮಾರ್ಗ ಕಾವ್ಯವೊಂದೆ ಮಹಾಕಾವ್ಯವಲ್ಲ. ಕಾವ್ಯ ತಮ್ಮ ಭಾವ ಚೆಂದ, ಅಲಂಕಾರಗಳಿಂದೊಡಗೂಡಿ ಶಬ್ದಾರ್ಥದ ಸಂದಿಯೊಳಗಿಂದ ಇಳಿದು ಬರುತ್ತದೆ. ಕವಿ ಅದನ್ನು ತನ್ನಲ್ಲಿ ಇಳಿಸಿಕೊಂಡು ರಸಿಕನಿಗೆ ಮುಟ್ಟಿಸುವುದೇ ವಿನಯ ಎಂದು ನನ್ನ ಭಾವನೆ ಎಂದು ಕವಿ ಬೇಂದ್ರೆ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

1972ರಲ್ಲಿ ಪ್ರಕಟವಾಗಿದ್ದ ಈ ಸಂಕಲನವನ್ನು ಬೆಂಗಳೂರು, ಮೈಸೂರು, ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಈ ಪುಸ್ತಕವನ್ನು ಪಠ್ಯವಾಗಿಸಿದ್ದವು. ಗುಣವನ್ನೇ ದೋಷವನ್ನಾಗಿ ತೋರಿಸುವ ಅಥವಾ ದೋಷವನ್ನೇ ಗುಣವೆಂದು ಘೋಷಿಸುವ ಎರಡು ವಿಮರ್ಶಾ ಸಂಪ್ರದಾಯಗಳಿವೆ. ಈ ಎರಡಕ್ಕೂ ಮೌನವಾಗಿರುವುದೇ ಕವಿಯ ವಿನಯ. ಕವಿ ವಾದಿಯಾಗಬಾರದು, ಸಂವಾದಿ ಆಗಬೇಕು ಎನ್ನುವುದು ನನ್ನ ನಿಲುವು ಎನ್ನುವ ಕವಿ ಬೇಂದ್ರೆಯವರು ’ವಿನಯ’ ಸಂಕಲನದಲ್ಲಿ ಬೇಂದ್ರೆಯವರ ರಸಘಟ್ಟಿಯಂತಹ 52 ಕವಿತೆಗಳು ಈ ಸಂಕಲನದಲ್ಲಿವೆ. ಪ್ರತಿ ಕವಿತೆಗೂ ಅಡಿ ಟಿಪ್ಪಣಿ ನೀಡಿರುವುದು ಮತ್ತು ಕೊನೆಯಲ್ಲಿ ವಾಮನ ಬೇಂದ್ರೆ ಯವರ ವಿವೇಚನೆ, ಶಬ್ದಗಳ ಅರ್ಥಸೂಚಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಮಾಡಿವೆ. ಕೊನೆಯಲ್ಲಿ ಬೇಂದ್ರೆಯವರ ಜೀವನ ಪರಿಚಯ, ಕೃತಿಗಳ ಪಟ್ಟಿ, ಬೇಂದ್ರೆಯವರ ಕುರಿತು ಬಂದ ಪುಸ್ತಕಗಳ ಪಟ್ಟಿ ನೀಡಲಾಗಿದೆ.

ಒಲವಿನಲ್ಲಿ ಬೆಳೆ, ಒಲವಿನಲ್ಲಿ ಉಳಿ, ಒಲವೇ ಬಾಳ ಚೆಲವು ಎನ್ನುವ ಕವಿ ಬಾ ಭೃಂಗವೇ ಬಾ ವಿರಾಗಿಯೆಂದದಿ, ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ಎಂದು ಸಂಭ್ರಮಿಸಬಲ್ಲರು. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಒಲವೆಂಬ ಹೊತ್ತಿಗೆ, ಬಿಸಿಲುಗುದುರೆ, ಮನದನ್ನೆ ಸಂಜೆಯ ಜಾವಿಗೆ, ಯಾರಿಗೂ ಹೇಳೊಣು ಬ್ಯಾಡಾ ಮುಂತಾದ ಭಾವಗೀತೆಗಳು ಈ ಸಂಕಲನದಲ್ಲಿವೆ. ತಾಜ ಮಹಲ್, ಬುದ್ಧ, ಒಂದೇ ಕರ್ನಾಟಕ, ಕುರುಡು ಕಾಂಚಾಣದಂತಹ ವೈಚಾರಿಕ ಪದ್ಯಗಳು, ಪಾತರಗಿತ್ತಿ ಪಕ್ಕಾ, ಕರಡಿ ಕುಣಿತ, ಹಕ್ಕಿ ಹಾರುತಿದೆ ನೋಡಿದಿರಾ, ಕವಿತೆಗಳು ಹಾಗೂ ಭೂಮಿಯನ್ನು ಕುರಿತ ಮೊದಲಗಿತ್ತಿ ,ಚಿಗರಿಗಂಗಳ ಚೆಲುವಿ ಕವನಗಳು ’ವಿನಯ’ದ ಭಾಗವಾಗಿವೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books