ಒಳಗೆ ಬುದ್ದನಿರುವ

Author : ನಿಂಗಪ್ಪ ಮುದೇನೂರು



Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ, ಆಲಮೇಲ ತಾಲೂಕು, ವಿಜಯಪುರ- 562135

Synopsys

ʻಒಳಗೆ ಬುದ್ದನಿರುವʼ ಇದು ಲೇಖಕ ಡಾ. ನಿಂಗಪ್ಪ ಮುದೇನೂರು ಅವರು ರಚಿಸಿದ ಕಾವ್ಯ ಕೃತಿಯಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ವಿಕ್ರಮ ವಿಸಾಜಿ ಅವರು, “ಭಾವಲೋಕದ ಕವಿತೆಗಳಿವು. ಮೊದಲಿನಿಂದಲೂ ನಿಂಗಪ್ಪ ಮುದೇನೂರರ ಕಾವ್ಯದಲ್ಲಿ ಭಾವಾಭಿವ್ಯಕ್ತಿಗೆ ಮೊದಲ ಸ್ಥಾನ. ಇಲ್ಲಿ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಕೂಡ ಇದೇ ಕಾರಣಕ್ಕೆ. ತನಗಿಷ್ಟವಾದ ವ್ಯಕ್ತಿ ಮತ್ತು ಪರಿಸರದ ಭಾವಕೋಶಗಳನ್ನು ಹಿಡಿಯುವುದಕ್ಕೆ ಇಲ್ಲಿ ಪ್ರಾಶಸ್ತ್ಯ. ಅಮ್ಮ, ಬುದ್ದ, ಕುಂವೀ ಎಲ್ಲರಿಗೂ ಇಲ್ಲಿ ಆರ್ದ್ರ ನೆಲೆ ಮತ್ತು ನೆನಪುಗಳಿವೆ. ಕವಿತೆಯ ವಿಚಿತ್ರ, ಅಚ್ಚರಿ ತಿರುವು ಇಲ್ಲಿ ಕಡಿಮೆ. ಹೀಗಾಗಿಯೇ ಬಹುತೇಕ ಕವಿತೆಗಳು ಪರಿಚಿತ ಮತ್ತು ಸರಳ ಎನಿಸುತ್ತಿವೆ. ನಿಂಗಪ್ಪ ಮುದೇನೂರು ಬುರ್‍ರಕಥಾ ಈರಮ್ಮ, ಜನಪದ ಮಹಾಕಾವ್ಯಗಳ ಬಗ್ಗೆ ಅಧ್ಯಯನ ಮಾಡಿದವರು. ಅನೇಕ ಒಳನೋಟ ಕೊಟ್ಟವರು. ಇದೆಲ್ಲವೂ ಅವರ ಕಾವ್ಯದ ಮೈ ಮತ್ತು ಮನಸ್ಸು ಕಟ್ಟುವಂತಾದರೆ ಚೆಂದ” ಎಂದು ಹೇಳಿದ್ದಾರೆ.

About the Author

ನಿಂಗಪ್ಪ ಮುದೇನೂರು
(01 June 1970)

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ.  ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ -  ದರೋಜಿ ಈರಮ್ಮ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ. ಸಾಹಿತ್ಯದ ...

READ MORE

Related Books