ಫಕೀರನ ಪ್ರೇಮಗೀತೆಗಳು

Author : ಮೇದರದೊಡ್ಡಿ ಹನುಮಂತ

Pages 76

₹ 100.00




Year of Publication: 2022
Published by: ಪ್ರಗತಿ ಗ್ರಾಫಿಕ್ಸ್‌
Address: ನಂ 119, 3 ನೇ ತಿರುವು, 8ನೇ ಮುಖ್ಯ ರಸ್ತೆ, ಹಂಪಿನಗರ ಬೆಂಗಳೂರು

Synopsys

ಈ ಕೃತಿಯು ಮೇದರದೊಡ್ಡಿ ಹನುಮಂತ ಬರೆದಿರುವಂತಹ ಪ್ರೇಮಗೀತೆಗಳ ಕವನಸಂಕಲನವಾಗಿದ್ದು. ಇದು ಹನುಮಂತರವರ ಮೂರನೆಯ ಕೃತಿಯಾಗಿದೆ. ಪ್ರೇಮ, ವಿರಹ, ಶೃಂಗಾರಲೀಲೆಯ ರಸಕಾವ್ಯ ಈ ಕೃತಿಯ ಸಾಲುಗಳಲ್ಲಿ ಅಡಕವಾಗಿವೆ. ಸುಮಾರು ಎಪ್ಪತ್ತಾರು ಪ್ರೇಮ ಕವಿತೆಗಳಿರುವ ಈ ಕವನಸಂಕಲನಕ್ಕೆ ಡಾ. ಎಂ ಬೈರೇಗೌಡ ಇವರು ಸುಧೀರ್ಘವಾದ ಮುನ್ನುಡಿಯನ್ನು ಬರೆದು, ಮೊದಲು ಪಂಡಿತರ ಸ್ವತ್ತಾಗಿದ್ದ ಸಾಹಿತ್ಯ, ವಸಾಹತುಶಾಹಿ ಪ್ರಭುತ್ವ ನೀಡಿದ ಶಿಕ್ಷಣದಿಂದ, ನವೋದಯ ಸಾಹಿತ್ಯ, ಸಾಂಸ್ಕೃತಿಕ ಚಿಂತನೆಗಳು ರೂಪಗೊಂಡಿದ್ದು ಎಂದರೆ ತಪ್ಪಾಗಲಾರದು. ಕಾವ್ಯವೆಂದರೆ ಕಟ್ಟಿಕೊಂಡಿದ್ದ ಎಲ್ಲಾ ಸಂಕೋಲೆಗಳನ್ನು ತೆಗೆದೊಗೆದು ಮುಕ್ತವಾಗಿ ಬರೆಯಬಹುದಾದ ಸಾಧ್ಯತೆಗಳನ್ನು ತೆರೆದು ತೋರಿತೆನ್ನಬಹುದು ಎಂದಿದ್ದಾರೆ. 

About the Author

ಮೇದರದೊಡ್ಡಿ ಹನುಮಂತ

ಮೇದರದೊಡ್ಡಿ ಹನುಮಂತ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇದರಗೊಡ್ಡಿ ಗ್ರಾಮದವರು. ಪದವಿಯವರಗೆ ಓದಿರುವ ಅವರು ಕಾವ್ಯವನ್ನೆ ಆರಾಧಿಸುತ್ತಾ, ತನ್ನ ಸುತ್ತಣ ಸಮಾಜವನ್ನು ಕಾವ್ಯಪ್ರಪಂಚನ್ನಾಗಿ ಮಾಡಿಕೊಂಡು ಕನ್ನಡ ಕಾವ್ಯಲೋಕದಲ್ಲಿ ವಿಹರಿಸುತ್ತಿದ್ದಾರೆ. ‘ಸಾಂಬಾರದೊಳಗಣ ಸೌಟು’  ಕವನಸಂಕಲನ ಹಾಗೂ ‘ಜಂಗಮ ವಚನಾಮೃತ’, ‘ಫಕೀರನ ಪ್ರೇಮಗೀತೆಗಳು’ ಎಂಬ ಪ್ರೇಮಗೀತೆಗಳ ಕವನಸಂಕಲನವನ್ನು ಹೊರತಂದಿದ್ದಾರೆ. ರಾಜ್ಯೋತ್ಸವ ಮತ್ತು ಕಾವ್ಯಶ್ರೀ ಪುರಸ್ಕಾರವು ಇವರಿಗೆ ಸಂದಿವೆ. ...

READ MORE

Related Books