ಸಮಕಾಲೀನ ಸಾಮಾಜಿಕ ವ್ಯವಸ್ಥೆ ಹಾಗೂ ವರ್ತಮಾನದ ವಸ್ತು ವಿಷಯಗಳನ್ನು ಒಳಗೊಂಡ ಉತ್ತಮವಾದ ಕವನ ಸಂಕಲನ. ಭಾಷಾ ಶೈಲಿ ಮತ್ತು ಕಾವ್ಯದ ಸೃಜನಶೀಲತೆಯಲ್ಲಿ ಕವಿ ಬಸವಣ್ಣ ಎಸ್ ಮೂಕಹಳ್ಳಿ ಹೊಸತನವನ್ನು ಧರಿಸಿ ತಮ್ಮದೇ ಆದ ಮೆರುಗನ್ನು ತಮ್ಮ ಕಾವ್ಯಗಳಿಗೆ ನೀಡಿದ್ದಾರೆ. ಇವನ ಕಾವ್ಯಕ್ಕೆ ಸ್ಪಂದಿಸದ ಹಾಗೂ ಸೋಲದ ಮನಸ್ಸು ಕನ್ನಡ ಕಾವ್ಯವನ್ನು ಅರಿತಿಲ್ಲ ಎನ್ನಬೇಕಾಗುತ್ತದೆ. ಅಷ್ಟು ಗಟ್ಟಿಯಾದ ಕಾವ್ಯಗಳನ್ನು ಇವರ ಈ ತಲಾಷ್ ಕಾವ್ಯ ಸಂಕಲನ ಒಳಗೊಂಡಿದ್ದು ಕನ್ನಡ ಕಾವ್ಯಕ್ಕೆ ಈ ಸಂಕಲನ ಹೊಸ ದಿಕ್ಕು ತೋರುತ್ತದೆ ಎನಿಸುತ್ತದೆ.