'ಜಗವೆಲ್ಲ ಕಾವ್ಯಮಯ' ಹೆಸರೇ ಹೇಳುವಂತೆ ಜಗದ ಅಣು ಅಣುವೂ ಕಾವ್ಯಕ್ಕೆ ಸ್ಫೂರ್ತಿ ಕೊಡುವಂತಹವೇ. ಅದನ್ನು ಆಳವಾಗಿ ಅರಿತು, ಪ್ರಕೃತಿಯು ಜಗದ ಭಾಗ ಅದನ್ನು ರಕ್ಷಿಸಿ ಕಾಪಾಡುವುದು ನಮ್ಮ ಹೊಣೆ ಎಂಬುದು ಇಲ್ಲಿನ ಕವಿತೆಗಳ ಸ್ಪಷ್ಟ ಆಶಯ.
’ಮೋಡ ಬಂದಾವೋ’ ಕವಿ ಖುಷಿಯಿಂದ ಮೋಡಗಳನ್ನು ವರ್ಣಿಸಿದ್ದಾರೆ. ಮಳೆ ಬರದೆ ಬಳಲಿ ಬರಡಾದ ಭೂತಾಯಿ ಹಾಗೂ ನೊಂದ ರೈತರ ನೋವನ್ನು ಮಳೆ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ’ಹಳೆ ನೆನಪ ಬದಿಗೆ ಸರಿಸಿ ಹೊಸ ಹುರುಪು ಮನಕೆ ಬರಿಸಿ, ಬೇವು ಬೆಲ್ಲದ ನೀತಿಯ ತಿಳಿಸಿ, ನವಯುಗಕೆ ದಾರಿ ತೋರು ಬಾ....’ಹೀಗೆ ನವಿರಾದ ಭಾವಗುಚ್ಛದಲ್ಲಿ ಸಾಗುತ್ತವೆ ಕವನಗಳು.
ಯುವ ಕವಿ ಗೋವಿಂದಪ್ಪ ಅವರು ಮೂಲತಃ ಹಂದನಕೆರೆಯವರು. 1984 ಜನವರಿ 01 ಜನನ. ವೃತ್ತಿಯಲ್ಲಿ ಶಿಕ್ಷಕರು. ’ಜಗವೆಲ್ಲ ಕಾವ್ಯಮಯ’ ಅವರ ಮೊದಲ ಕವನ ಸಂಕಲನ. ಅವರಿಗೆ ’ಕಾವ್ಯರತ್ನ ಪ್ರಶಸ್ತಿ’ ದೊರೆತಿದೆ. ’ಗೋಪಿ ಹಂದನಕೆರೆ’ ಎಂಬುದು ಅವರ ಕಾವ್ಯನಾಮ. ...
READ MORE