ಕಣವಿಯವರ 14ನೆಯ ಕವನ ಸಂಕಲನ ’ಶಿಶಿರದಲ್ಲಿ ಬಂದ ಸ್ನೇಹಿತ’. 1994ರಲ್ಲಿ ಪ್ರಕಟವಾದ ಈ ಸಂಕಲನದಲ್ಲಿ 40 ಕವಿತೆಗಳಿವೆ.
ಈ ಸಂಕಲನವು ಕವಿಯ ಜೀವನೋತ್ಸಾಹ ಪ್ರತೀಕವಾಗಿದೆ. ಸ್ವ ಅನುಭೂತಿಯನ್ನ ಕಣವಿಯವರು ಮೊದಲಿನಿಂದಲೂ ತಮ್ಮ ಕಾವ್ಯದಲ್ಲಿ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಅದು ಈ ಸಂಗ್ರಹದಲ್ಲಿಯೂ ಮುಂದುವರೆದಿದೆ. ಜೀವನದ ಶಿಶಿರದಲ್ಲಿಯೂ ಜೀವನದ ಇತಿಮಿತಿ ಅರಿತ ಸಂತೃಪ್ತಿ, ನಿಶ್ಚಿತ ನಿಲುವು, ಚೆಲುವಿನ ಆವಿಷ್ಕಾರ ಕಾಣು ಕವಿ ದೃಷ್ಟಿ ಇಲ್ಲಿನ ಕವಿತೆಗಳಲ್ಲಿದೆ.
ಮೊದಲನೆಯ ಕವಿತೆಯನ್ನೇ ಸಂಕಲನದ ಶೀರ್ಷಿಕೆಯನ್ನಾಗಿ ಇರಿಸಲಾಗಿದೆ. ಶಿಶಿರದ ಚಳಿಗಾಲದಲ್ಲಿ ಬಂದ ಸ್ನೇಹಿತ ಬೇರಾರೂ ಅಲ್ಲ ’ಮುಪ್ಪು’. ಅವನ ಜೊತೆಗೆ ಮಾತು-ಕತೆಯನ್ನು ನಾಟಕೀಯವಾಗಿ ಚಿತ್ರಿಸಲಾಗಿದೆ. ’ಚಹವ ಗುಟುಕರಿಸುತ್ತ ಮೇಲೆದ್ದ ಬಾಲ್ಯದ ಗೆಳೆಯ ನಕ್ಕು, ಕೈಕುಲುಕಿ ದಟ್ಟಮಂಜಿನಲ್ಲಿ ಕರಗಿಹೋದ’ ಎಂದು ಕೊನೆಗೊಳ್ಳುತ್ತದೆ. ಕವಿತೆಯ ಸ್ವರೂಪವನ್ನು ವಿವರಿಸುವ ಕವಿತೆಯೊಂದಿದೆ. ಕುಂಜಾಲು ಕಣಿವೆ, ಮೂರ್ತಿಪೂಜೆ, ಜಯದೇವಿ ತಾಯಿ, ಕಟ್ಟಿಮನಿಯವರನ್ನು ನೆನೆದು, ಸೌಜನ್ಯದ ಗಣಿ, ಧವಳಶ್ರೀ, ಶಾಂತರಸ, ಗ್ರಂಥನಿವೇದನೆ ಎಂಬ ಸಾನೆಟ್ ಕವಿತೆಗಳಿವೆ. ಹಾಗೆಯೇ ದಕ್ಷಿಣ ಆಫ್ರಿಕಾ, ಜೆಕ್, ಹಿಂದಿ ಭಾಷೆಯ ಕವಿತೆಯ ಅನುವಾದಗಳನ್ನು ಒಳಗೊಂಡಿದೆ.
‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...
READ MORE