ಕಿತ್ತಳೆ ಹಣ್ಣಲ್ಲ

Author : ಕೆ. ಚಿನ್ನಪ್ಪ ಗೌಡ

Pages 72

₹ 75.00




Year of Publication: 2019
Published by: ಆಕೃತಿಆಶಯ ಪಬ್ಲಿಕೇಷನ್ಸ್‌
Address: ಲೈಟ್‌ ಹೌಸ್‌ ಹಿಲ್‌ ರಸ್ತೆ, ಮಂಗಳೂರು
Phone: 080242443002

Synopsys

’ಕಿತ್ತಳೆ ಹಣ್ಣಲ್ಲ’ ಕೆ. ಚಿನ್ನಪ್ಪ ಗೌಡರ ಮೊದಲ ಕವನ ಸಂಕಲನ. ಕವಿಯ ಸಂಶೋಧನೆ, ಅನುಭವಗಳ ಉತ್ಪನ್ನಗಳು ಕವನಗಳಾಗಿ ರೂಪು ತಾಳಿವೆ. ಸಂಕಲನದ ಶೀರ್ಷಿಕೆಯ ಕವನ ’ಕಿತ್ತಳೆ ಹಣ್ಣಲ್ಲ’, ಇಲ್ಲಿಯ ಒಟ್ಟು ಕವನಗಳ ಸಂರಚನೆಯ ಸೂಚನೆ ಕೊಡುತ್ತದೆ. ’ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ ಕಿತ್ತಳೆ ಬರಿಯ ಹಣ್ಣಲ್ಲ’ ಎಂದು ಆರಂಭವಾಗುವ ಕವನವು ಅಕ್ಷರ ಸಂತ ಹಾಜಬ್ಬನವರ ಬದುಕಿನ ದರ್ಶನವನ್ನು ಕಟ್ಟಿಕೊಡುತ್ತದೆ. ಚಿನ್ನಪ್ಪ ಗೌಡರ ’ಭೂತಾರಾಧನೆ: ಜಾನಪದೀಯ ಅಧ್ಯಯನ’ ಸಂಶೋಧನೆಯ ಮಾನವೀಯ ಮುಖಗಳು ಕವನಗಳ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಿವೆ. ’ಪರವ ನನ್ನಯ-ಕುರುಡು ಹಸಿವು’, ನಿತ್ಯೋತ್ಸವ ಪರತಿ’, ’ಈ ಕುಣಿತ ಯಾಕೆ’, ಈ ಕವನಗಳು ಭೂತ ಕಟ್ಟುವ ಪರವನಂಥವರು, ಅವರ ಜೊತೆಗಿನ ಪರತಿಯರು ವಾಸ್ತವ ಜಗತ್ತಿನಲ್ಲಿ ಬದುಕುವ ಪರಿಗಳನ್ನು ಅನಾವರಣ ಮಾಡುತ್ತವೆ. ’ಭೂತದಿಂದ ವರ್ತಮಾನಕೆ’ ಎನ್ನುವ ಕವನ ಉಳಿದ ಕವನಗಳ ಆಶಯದ ಸಾರರೂಪದಂತಿದೆ. ನಿತ್ಯೋತ್ಸವ ಪರತಿ ಕವಿತೆಯ ನಾಲ್ಕು ಸಾಲು ಓದಿಗಾಗಿ: ’ಒಳಗೆ ಅಳುವಂತಿದ್ದ ಎಲ್ಲವನು ಕಳಚಿ ನೋಡುತ್ತಿದ್ದಂತೆ ಕಂಡ ಸಂಜೆಯವನಂತಾದ ಪರವ, ನನ್ನಯ ನನ್ನಂತಾದ ನಿಜದ ಒಂದು ಚಿತ್ರ’

About the Author

ಕೆ. ಚಿನ್ನಪ್ಪ ಗೌಡ

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲ್ಲೂಕಿನ ಕೂಡೂರಿನವರಾದ ಸಾಹಿತಿ ಕೆ. ಚಿನ್ನಪ್ಪ ಗೌಡ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ’ಭೂತಾರಾಧನೆ- ಜಾನಪದೀಯ ಅಧ್ಯಯನ’ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಜಾಲಾಟ, ಭೂತಾರಾಧನೆ, ಭೂತಾರಾಧನೆ - ಜಾನಪದೀಯ ಅಧ್ಯಯನ, ಸಂಸ್ಕೃತಿ ಸಿರಿ, ಗೌಡ ಸಂಸ್ಕೃತಿ ಮತ್ತು ಆಚರಣೆಗಳು, ಸೇರಿಗೆ, ಕಿತ್ತಲೆ ಹಣ್ಣಲ್ಲ ಮುಂತಾದವು.  ...

READ MORE

Related Books