'ಮುತ್ತಿನ ಮಳೆ' ಸೋಮಲಿಂಗ ಬೇಡರ ಅವರ ಮೊದಲ ಕವನ ಸಂಕಲನವಾಗಿದೆ. ಇಲ್ಲಿನ ಹಲವಾರು ರಚನೆಗಳು ತಾಳ ಮತ್ತು ಲಯಬದ್ಧವಾಗಿವೆ. ತಮ್ಮ ಗೇಯಾತ್ಮಕತೆಯಿಂದ ಗಮನ ಸೆಳೆಯುತ್ತವೆ. ದ್ವಿಪದಿ, ತ್ರಿಪದಿ, ಚೌಪದಿ ಹಾಗೂ ಷಟ್ಪದಿಯಲ್ಲಿ ಕವನಗಳಿದ್ದು ಸರಾಗವಾಗಿ ಹಾಡಿ ಆನಂದಿಸಬಹುದಾಗಿದೆ. ಬರಗಾಲ, ಮುಳುಗಡೆ, ತಾಯಿ, ಮಗಳು, ಶ್ರಾವಣ, ಚಂದಿರ ಇಂಥ ಜಾನಪದ ಧಾಟಿಯ ಕವನಗಳು ಗಮನ ಸೆಳೆಯುತ್ತವೆ.
ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006), ಹಕ್ಕಿ ಗೂಡು ( ಮಕ್ಕಳ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ಸಮೀರವಾಡಿ ದತ್ತಿ, ಮಕ್ಕಳ ...
READ MORE