ಮನಸು ಗಾಂಧಿ ಬಜಾರು-ಕೆ.ಎಸ್. ನಿಸಾರ ಅಹಮದ್ ಅವರು ಕವನ ಸಂಕಲನ. ಬಹಿರಂಗದಲ್ಲಿ ಅಂತರಂಗದ ನುಡಿಗಳನ್ನು ಅಭಿವ್ಯಕ್ತಿಸುವ ಇಲ್ಲಿಯ ಕಾವ್ಯಗಳು ಮನಸ್ಸಿನ ಮಾತುಗಳಂತಿವೆ. ಭಾವ ಸಂವೇದನೆಯಲ್ಲಿ ಮಿಂದು ಏಕಾಂತ ಗಾಳಿಯನ್ನು ಪಸರಿಸುವ ಈ ಕವಿತೆಗಳು ಕವಿಯ ಅಂತಃಕರಣವನ್ನು ತೆರೆದಿಡುತ್ತವೆ. ಸಂಕಲನದ ‘ನಿನ್ನ ಮೈತ್ರಿ’ ಎಂಬ ಕವಿತೆಯ ಸಾಲುಗಳು ಹೀಗಿವೆ ಒಮ್ಮೊಮ್ಮೆ ಅಗಲಿಕೆಯ ಆಶಂಕೆ ಹದ್ದಾಗಿ ಎರಗಿ, ಸುಖವನೆ ಕದ್ದು ಹಾರುವಂತೆ ತೋರುತಿದೆ, ತೊರೆಯದಿರು; ಹರಿದಿರುವ ಜೀವನಕೆ ಅಣೆಕಟ್ಟ ಬಿಗಿಯದಿರು ನಾರುವಂತೆ!
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE