ಬುದ್ಧನ ಮೇಲೂ ಯುದ್ಧ

Author : ಮೋದೂರು ತೇಜ

Pages 146

₹ 100.00




Year of Publication: 2010
Published by: ಶ್ರೀಸಾಯಿ ಸಾಹಿತ್ಯ, ಪ್ರಕಾಶನ
Address: 625, 9ನೇ ಡಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104
Phone: 08023403307

Synopsys

‘ಬುದ್ಧನ ಮೇಲೂ ಯುದ್ಧ’ ಮೋದೂರು ತೇಜ ಅವರ ಮೊದಲ ಕವನ ಸಂಕಲನ. ಲೇಖಕ ಕಲ್ಲೇಶ್ ಕುಂಬಾರ್ ಕೃತಿಗೆ ಬೆನ್ನುಡಿ ಬರೆದು ‘ಬಂಜರು ಹೊಲದಲ್ಲಿ ಕರುಣೆಯ ಬೀಜ ಕುಡಿಯೊಡೆಯುವುದಕ್ಕೆ ಕಂಬನಿ ಸುರಿಸಿ ಬರುವೆ’- ಎನ್ನುವ ಗೆಳೆಯ ಮೋದೂರು ತೇಜನ ಆತ್ಮದ ಮೊರೆಯಂತಿರುವ ಇಲ್ಲಿನ ಬಹುತೇಕ ಕವಿತೆಗಳು, ಮನುಷ್ಯ ಸಂಬಂಧಗಳೇ ನಶಿಸಿ ಹೋಗುತ್ತಿರುವ ಈ ಲೋಕದಲ್ಲಿನ ವರ್ತಮಾನದ ಕ್ರೂರ ಮನಸ್ಸುಗಳ ಮುಖವಾಡವನ್ನು ಕಳಚಿಬಿಡುತ್ತಲೇ ಸದ್ಯದ ದಿನಗಳಲ್ಲಿ ಇರಬೇಕಾಗಿರುವ ಮನುಷ್ಯ ಸಂಬಂಧಗಳ ಅನಿವಾರ್ಯತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತವೆ. ಕ್ರೌರ್ಯವೇ ತುಂಬಿರಬಹುದಾದ ಈ ವ್ಯವಸ್ಥೆಯಲ್ಲಿನ ಸಂಗತಿಗಳನ್ನು ಒಳಗೊಳಗೆ ಸೂಕ್ಷ್ಮವಾಗಿ ಗ್ರಹಿಸುತ್ತಲೇ, ಆ ಸಂಗತಿಗಳ ಕುರಿತಾಗಿ ತನ್ನ ವೈಯಕ್ತಿಕ ನೆಲೆಯಲ್ಲಿರಬಹುದಾದ ನೋವು, ತಲ್ಲಣ ಸಂಕಟಗಳನ್ನೆಲ್ಲ ಬತ್ತಿಯಂತೆ ಹೊಸೆದು ಕವಿತೆಯಾಗಿಸಿರುವ ಮೋದೂರು ತೇಜ, ಕರುಣೆ ತುಂಬಿದ ದೇವರ ಊರಲಿ ಮಾತು ಮಾತಿಗೆ ಕದನವೇಕೆ ಎಂದು ಕೇಳುವುದು ಕೇವಲ ಅನುಕಂಪನದ ಮಾತುಗಳೆನಿಸುವುದಿಲ್ಲ. ಇದು ಮೋದೂರು ತೇಜ ಅವರ ಮೊದಲ ಕವನ ಸಂಕಲನವಾದರೂ ಇಲ್ಲಿನ ಕವಿತೆಗಳು ಓದುಗನನ್ನು ಆಪ್ತವಾಗಿ ತಟ್ಟುತ್ತವೆ. ಗಾಢವಾಗಿ ಕಾಡುತ್ತವೆ, ಮತ್ತು ಆರ್ದ್ರವಾಗಿ ಚಿಂತನೆಗೀಡು ಮಾಡುತ್ತವೆ ’ ಎಂದು ಪ್ರಶಂಸಿಸಿದ್ದಾರೆ.

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books