ಪ್ರೀತಿಯ ಪರದೆ ಏಕಿನ್ನು

Author : ವಿದುಷಿ ನಂದಿನಿ ನಾರಾಯಣ್

Pages 98

₹ 66.00




Year of Publication: 2013
Published by: ದಿ ಜರ್ನಿ
Address: ನಾರಿ ನಿವಾಸ್, #564, 4ನೇ ಅಡ್ಡರಸ್ತೆ, ಹೆಚ್. ಎಂ.ಟಿ. ಬಡಾವಣೆ, ರವೀಂದ್ರನಾಥ್ ಠಾಗೋರ್ ನಗರ ಬೆಂಗಳೂರು.
Phone: 9731112266

Synopsys

‘ಪ್ರೀತಿಯ ಪರದೆ ಏಕಿನ್ನು’ ಕೃತಿಯು ನಂದಿನಿ ಸತೀಶ್ (ವಿದುಷಿ ನಂದಿನಿ ನಾರಾಯಣ)ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಸಾ. ಶಿ ಮರುಳಯ್ಯ ಅವರು, ಕಾವ್ಯಶಿಲ್ಪಕ್ಕೆ ಲೋಕಾನುಭವ, ಕಾವ್ಯಾನುಭವ ಮತ್ತು ದರ್ಶನಾಭೂತಿಗಳು ಅನಿವಾರ್ಯ. ಇವುಗಳ ಸಹಯೋಗ ಸಿದ್ಧಿಯೇ ಕಾವ್ಯ ಸಾಕ್ಷಾತ್ಕಾರ. ಈ ತತ್ತ್ವ ಕಾವ್ಯಸೃಷ್ಠಿಗಳಷ್ಟೇ ಸೀಮಿತವಲ್ಲ; ಅಲ್ಲ ಕಲೆಗಳಲ್ಲೂ ಸಮಪ್ರಮಾಣದಲ್ಲಿರುವಂಥವು ಇವುಗಳಲ್ಲಿ ಮೊದಲನೆಯದು ಲೋಕಾನುಭವ. ಅನುಭವಿಲ್ಲದ ಸಾಹಿತ್ಯ ಬಂಜೆಗೋವಿನ ಕೆಚ್ಚಲು! ಕವಿ ಪರಿಸರದ ಶಿಶುವಾದ ಕಾರಣ, ಅವನು ತನ್ನ ಪರಿಸರಕ್ಕೆ ಸದಾ ಸ್ಪಂದಿಸುತ್ತಲೇ ಇರುತ್ತಾನೆ. ತನ್ನ ತೆರೆದ ಹೃದಯದಿಂದ ಪಡೆದ ವಿಶೇಷಾನುಭೂತಿಯನ್ನು ತನ್ನ ಕಾವ್ಯರಚನೆಯಲ್ಲಿ ಅಭಿವ್ಯಕ್ತಿಸುತ್ತಾ, ಅಂದಿನ ಬದುಕಿನ ನಗ್ನ ಚಿತ್ರಣವನ್ನು ದಾಖಲಿಸುತ್ತಾ ಹೋಗುತ್ತಾನೆ. ಎರಡನೆಯದಾಗಿ, ಕಾವ್ಯನುಭವದಲ್ಲಿ ತನ್ನ ಪೂರ್ವಜರ ಅಥವಾ ಪ್ರತಿಭಾಶಾಲಿ ಕವಿಗಳ ಕಾವ್ಯರಚನೆಯ ಬಗೆಗೆ ಪರಿಶ್ರಮ ಪಡೆದು, ತನ್ನ ದೃಷ್ಠಿಗೆ ತಕ್ಕಂತೆ ಅದಕ್ಕೆ ರೂಪ ಪ್ರಧಾನ ಮಾಡುವ ಸ್ವಾತಂತ್ಯ್ರವಹಿಸುತ್ತಾನೆ. ಮೂರನೆಯದಾಗಿ, ತಾನೇರಿದ ಆಧ್ಯಾತ್ಮ ಚಿಂತನದತ್ತ ಸಹೃದಯ ಶ್ರೋತೃವನ್ನು ಕೊಂಡೊಯ್ಯುವ ಸಾಹಸ ಮಾಡುತ್ತಾನೆ. ಈ ಮೂರು ಬಗೆಯ ಕಾರ್ಯಸಾಧನೆಗಳಿಗೆ ಕವಯಿತ್ರಿ ನಂದಿನಿ ಸತೀಶ್ ಅವರ ಕ್ರಿಯಾಯೋಗ ಸಂಭೂತವಾಗಿದೆ. ಅದಕ್ಕೆ ಕಾರಣ ಕವಯತ್ರಿಯ ಪೂರ್ವಜರಾದ ಖ್ಯಾತ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಜಿ. ಕೆ ವೆಂಕಟೇಶ್ ಮತ್ತು ಭರತನಾಟ್ಯ ಕಲಾವಿದ ಶ್ರೀರಾಧಾಕೃಷ್ಣ ಇವರುಗಳ ಪ್ರತಿಭೆ -ಪರಾಪ್ರತಿಭೆಗಳು ಕವಯತ್ರಿ ನಂದಿನಿ ಅವರಲ್ಲಿ ಅನುಭೂತಗೊಂಡಿವೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ವಿದುಷಿ ನಂದಿನಿ ನಾರಾಯಣ್

ವಿದುಷಿ ನಂದಿನಿ ನಾರಾಯಣ್ ಅವರು ಜರ್ಮನಿಯಲ್ಲಿ ವಾಸವಿದ್ದಾರೆ. ಶಾಸ್ತ್ರೀಯ ನೃತ್ಯ, ನೃತ್ಯಸಂಯೋಜಕಿ, ಲೇಖಕಿ, ಕವಿ, ವೃತ್ತಿಪರ ಕಾರ್ಯನಿರ್ವಾಹಕರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. , ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ. ರಂಗಮಂಥನದ ಸಂಸ್ಥಾಪಕರಾದ ಅವರಿಗೆ  18ನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ‘ವಿದೂಷಿ’ ಸೇರಿದಂತೆ ನಾಟ್ಯ ಮಯೂರಿ, ನಾಟ್ಯತರಂಗಿಣಿ. ಎಂಬ ಬಿರುದುಗಳು ಲಭಿಸಿವೆ.  ಕೃತಿಗಳು: ಮಳೆಯಲ್ಲಿ ಮಳೆಯಾಗಿ (ಕವನ ಸಂಕಲನ), 7 ರೂಮ್ಸ್ (ಕಥಾ ಸಂಕಲನ) ...

READ MORE

Related Books