‘ಹೊಳೆಸಾಲು’ ಲೇಖಕ ಡಾ. ಸುರೇಶ್ ನಾರಾಯಣ ನಾಯ್ಕ ಅವರ ಕವನ ಸಂಕಲನ. ತನ್ನ ನೆಲದಲ್ಲಿ ಅರಳಿದ ಕೇದಿಗೆ ಕವಿಯ ಗಮನ ಸೆಳೆದಿದೆ. ತಾನು ಹೆಜ್ಜೆ ಹಾಕಿದ ಮಣ್ಣಿನಲ್ಲಿ ತನ್ನಷ್ಟಕ್ಕೆ ಅರಳಿ ನಿಂತ ಹೂವು ಕವಿಗೆ ಪ್ರಾದೇಶಿಕ ಸಂಸ್ಕೃತಿಯ ಬಿಂಬವಾಗಿ ಕಾಡಿದೆ. ಆ ಕಾರಣ ಈ ಕವನ ರಚಿಸಿ ಕವಿ ಓದುಗರ ಮನವನ್ನು ತಮ್ಮತ್ತ ಸೆಳೆದಿದ್ದಾರೆ. ಕೇದಿಗೆಯ ಪರಿಮಳಕ್ಕೆ ಕವಿ ಮನಸೋತ ಬಗೆ ಚೆನ್ನಾಗಿದೆ. ಜೊತೆಗೆ ವ್ಯಕ್ತಿ ಚಿತ್ರಗಳನ್ನು ಸುರೇಶ ತಮ್ಮ ಕವನಗಳಲ್ಲಿ ಸುಂದರವಾಗಿ ಕಡೆದಿರುವ ಬಗೆ ಸೊಗಸಾಗಿದೆ. ಮಹಾತ್ಮರ ಮಹಾತ್ಮೆ, ಬುದ್ಧನೆಂಬ ಅನ್ವರ್ಥ, ಸಾಯಿಬಾಬಾ ಮತ್ತು ಪ್ರಶ್ನೆ, ವೈರಸ್ ಶಿರಾಲಿ, ಬೇಂದ್ರೆ, ಭಟ್ಕಳದ ಮಲ್ಲಿಗೆ, ಅಣ್ಣಾ ಹಜಾರೆ ಇವರ ಕುರಿತು ಕವಿ ಶಬ್ದಗಳ ಮೂಲಕ ಲೇಖಿಸಿದ ಚಿತ್ರ ಅಲ್ಲಲ್ಲಿ ಮನ ಸೆಳೆಯುತ್ತವೆ.
ಕವಿ ವಿಮರ್ಶಕ ಸಂಶೋಧಕ ಸುರೇಶ ನಾರಾಯಣ ನಾಯ್ಕ ಅವರದ್ದು ದಣಿವರಿಯದ ಬರಹ. ಅಪ್ಪಟ ಗ್ರಾಮೀಣ ಪ್ರತಿಭೆ.ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಉತ್ತರ ಕನ್ನಡದ ಹೊನ್ನಾವರದಲ್ಲಿ 1968 ಜುಲೈ 26ರಂದು ಜನಿಸಿದರು. ಅವರ ಇತ್ತಿಚಿನ ಕವನ ಸಂಕಲನ ‘ಪುರುಷಾರ್ಥ’ 2020ರಲ್ಲಿ ಪ್ರಕಟಣೆ ಕಂಡಿದೆ. ಸಂಶೋಧನ ದೀಪ, ಪುರುಷಾರ್ಥ, ಹೊಳೆಸಾಲು, ವಿಜಯ ಶೋಧ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE