ಮಾಧವಿ ಭಂಡಾರಿ ಕೆರೆಕೋಣ ಅವರ ಮೊದಲ ಕವನಸಂಕಲನ ಇದು. ನಾನು ಆಡಬೇಕೆಂದುಕೊಂಡಿದ್ದನ್ನೆಲ್ಲ ‘ಹರಿದ ಸ್ಕರ್ಟಿನ ಹುಡುಗಿ’ಯ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕವಯಿತ್ರಿ. ಎದೆಯಾಳದ ವೇದನೆ ಸಂವೇದನೆಯಾಗಿ ಯಶಸ್ವೀ ಕಾವ್ಯಕ್ಕೆ ಜನ್ಮ ಕೊಡುತ್ತದೆನ್ನುವುದಕ್ಕೆ ಈ ಸಂಕಲನ ಸಾಕ್ಷಿಯಾಗಿದೆ ಎಂದು ಬೆನ್ನುಡಿಯಲ್ಲಿ ಕವಯಿತ್ರಿ ಸುಕನ್ಯಾ ಮಾರುತಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಬಂಡಾಯ ಸಾಹಿತಿ ಡಾ. ಆರ್. ವಿ. ಭಂಡಾರಿ ಹಾಗೂ ಸುಬ್ಬಿ ದಂಪತಿಗಳ ಮಗಳಾಗಿ 1962 ರಲ್ಲಿ ಜನನ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿ ಈಗ ವಿಶ್ರಾಂತ ಜೀವನ. ಪುಸ್ತಕಗಳು: 'ಹರಿದ ಸ್ಕರ್ಟಿನ ಹುಡುಗಿ', 'ಕಡಲು ಕಳೆದಿದೆ', 'ಮೌನ ಗರ್ಭದ ಒಡಲು' (ಕವನ ಸಂಕಲನ), 'ನೀನುಂಟು ನಿನ್ನ ರೆಕ್ಕೆ ಉಂಟು' (ಸಂಪಾದಿತ ದಶಕದ ಮಹಿಳಾ ಕಾವ್ಯ), 'ಆಗೇರ ಮಹಿಳಾ ಸಂಸ್ಕೃತಿ' (ಸಾಹಿತ್ಯ ಅಕಾಡೆಮಿ ಪ್ರಕಟಣೆ), 'ಪಿಸು ದನಿ' (ಲೇಖನ ಸಂಕಲನ), 'ಗುಲಾಬಿ ಕಂಪಿನ ರಸ್ತೆ'(ಕಥಾ ...
READ MORE