ಕವಿ ಈರಣ್ಣ ಮೂಲಿಮನಿ (ಕಸ್ತೂರೀಪ್ರಿಯ) ಬರೆದ ಮೊದಲ ಕವನ ಸಂಕಲನ. ಹೃದಯದ ಕರೆ, ಪಕ್ಕದ್ಮನೆ ಹುಡುಗಿ, ಭಾಳ್ ದಿವಸ್ ಆತು ನೋಡಿ, ಚೆರಗ ಚೆಲ್ಲಾಕ ಹೋಗೋನು ಬಾರೆ, ಮನದ ಮಲ್ಲಿಗೆ, ಹೃದಯ ಮಿಲನ ಹೀಗೆ ಒಟ್ಟು 22 ಕವಿತೆಗಳಿದ್ದು,ವಿಷಯ ವೈವಿಧ್ಯತೆಯಿಂದ, ನಿರೂಪಣಾ ಶೈಲಿಯಿಂದ ಕಂಗೊಳಿಸುತ್ತವೆ. ಕವಿಯ ಮೊದಲ ಕವನ ಸಂಕಲನವಾದರೂ ಕಾವ್ಯಾಂಶದೆಡೆಗೆ ಸದಾ ಎಚ್ಚರಿರುವ ಸೂಚನೆಗಳು ಕವನಗಳಲ್ಲಿ ಕಂಡು ಬರುತ್ತದೆ.
ಬಾಗಲಕೋಟೆ ಜಿಲ್ಲೆ ಅಮೀನಗಡದ ಈರಣ್ಣ ಮೂಲೀಮನಿ, ಕವಿಗಳು. ಸದ್ಯ ಬೆಂಗಳೂರಿನಲ್ಲಿ ವಾಸ. ಸುಮಾರು 22 ವರ್ಷದಿಂದ ದುಬೈನಲ್ಲಿ ನೆಲೆಸಿದ್ದು, ಅಲ್ಲಿದ್ದೇ ಹೃದಯ ಪಲ್ಲವಿ-ಕವನ ಸಂಕಲನ (2000) ಪ್ರಕಟಿಸಿದ್ದರು. 2006 ರಲ್ಲಿ ಪ್ರಪ್ರಥಮ ಕನ್ನಡ ಆಡಿಯೋ ಸಿ.ಡಿ. ಹೊರತಂದಿದ್ದಾರೆ. ಚಂದನ ಹಾಗೂ ಸುವರ್ಣ ವಾಹಿನಿಯಲ್ಲಿ ಹೊರನಾಡಿನ "ಕನ್ನಡಿಗರು ದುಬೈ"/ಕನ್ನಡ ಕೂಟ ಯು.ಎ.ಇ. ಕನ್ನಡಪರ ಕೈಂಕರ್ಯ ಹಾಗೂ ಅವರ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದ್ದರು. 2010 ರಿಂದ ದುಬೈನಲ್ಲಿ ‘ಕನ್ನಡ ಪಾಠಶಾಲೆ’ ಆರಂಭಿಸಿ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುತ್ತಾ, ಕನ್ನಡ ಕೂಟದ ಗ್ರಂಥಾಲಯ ಪ್ರಾರಂಭಿಸಿ ನಾಡಿನ ಸಂಸ್ಕೃತಿ ಬಗ್ಗೆ ಅಭಿಮಾನ ಮೆರೆದಿದ್ದಾರೆ. ...
READ MORE